Advertisement

ನಂದಿಬೆಟ್ಟಕ್ಕೆ ನಿರ್ಬಂಧ; ಅವುಲಬೆಟ್ಟದತ್ತ ಪ್ರವಾಸಿಗರು

03:55 PM Aug 09, 2021 | Team Udayavani |

ಗುಡಿಬಂಡೆ: ಜಿಲ್ಲೆಯ ಪ್ರಸಿದ್ಧ ಗಿರಿಧಾಮ ನಂದಿಬೆಟ್ಟಕ್ಕೆ ವಾರಾಂತ್ಯದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಏರಿರುವುದರಿಂದ, ಹತ್ತಿರದ ಆವುಲಬೆಟ್ಟಕ್ಕೆ,
ಸುರಸದ್ಮಗಿರಿ ಬೆಟ್ಟ, ವಾಟದಹೊಸಹಳ್ಳಿ ಕೆರೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಕೋವಿಡ್‌ 3ನೇ ಅಲೆಯ ಆತಂಕ ಎದುರಾಗಿದೆ.

Advertisement

ಕೋವಿಡ್‌ ಮೂರನೇ ಅಲೆ ಸೋಂಕು ಈಗಾಗಲೇ ನೆರೆಯ ರಾಜ್ಯಗಳಲ್ಲಿ ಕಾಣಿಸಿಕೊಂಡು ಕರ್ನಾಟಕಕ್ಕೂ ವಿಸ್ತರಿಸುತ್ತಿರುವ ಸಮಯದಲ್ಲೇ ಆಯಾ  ಜಿಲ್ಲೆಯ ಜಿಲ್ಲಾಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿ ತಾಣಗಳಿಗೆ ವಾರಾಂತ್ಯ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ಏರಿ ಆದೇಶ ಹೊರಡಿಸಿದ್ದಾರೆ.

ನಂದಿ ಬೆಟ್ಟಕ್ಕೆ ನಿರ್ಬಂಧ: ಅದರಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್‌.ಲತಾ ಅವರು ಕೋವಿಡ್‌ ಹೆಚ್ಚಾಗದಂತೆ ಸೂಕ್ತ ಕ್ರಮವಹಿಸುವ ನಿಟ್ಟಿನಲ್ಲಿ ಈಗಾಗಲೇ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಜೊತೆ ಸಂವಾದ ನಡೆಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಹಾಗೆಯೇ ನಂದಿ ಬೆಟ್ಟಕ್ಕೆ ವಾರಾಂತ್ಯದಲ್ಲಿ ಪ್ರವಾಸಿಗರ ಭೇಟಿಗೆ ನಿರ್ಬಂಧ ಏರಿದ್ದಾರೆ.

ಇದನ್ನೂ ಓದಿ:ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ: ಶೇಕಡಾ 99.9 ವಿದ್ಯಾರ್ಥಿಗಳು ಪಾಸ್, ಓರ್ವ ಮಾತ್ರ ಫೇಲ್

ಅವುಲಬೆಟ್ಟಕ್ಕೆ ಭೇಟಿ: ಬೆಂಗಳೂರಿನಿಂದ ಕೂಗಳತೆಯ ದೂರದಲ್ಲಿರುವ ಜಿಲ್ಲೆಯ ನಂದಿಬೆಟ್ಟ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಆದರೆ,
ವಾರಾಂತ್ಯದಲ್ಲಿ ನಿರ್ಬಂಧ ಏರಿರುವ ವಿಷಯ ತಿಳಿಯದ ಪ್ರವಾಸಿಗರು ಅಲ್ಲಿಗೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ನಿರ್ಬಂಧದ
ವಿಷಯ ತಿಳಿದ ನಂತರ ಬಂದ ದಾರಿಗೆ ಸುಂಕವಿಲ್ಲ ‌ ವೆಂಬಂತೆ ವಾಪಸ್‌ ಆಗುವುದು ಏಕೆ ಎಂದು, ನಂದಿ ಬೆಟ್ಟದ ಹತ್ತಿರುವ ಇರುವ ಅವುಲ
ಬೆಟ್ಟ, ಸುರಸದ್ಮಗಿರಿ ಮತ್ತು ವಾಟದ ಹೊಸಹಳ್ಳಿಯ ಕೆರೆಗೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಪ್ರಾಕೃತಿಕ ಸೌಂದರ್ಯ ಸವಿದು ಸಂಭ್ರಮಿಸಿದ್ದರು‌ .

Advertisement

ಬೆಟ್ಟದ ಮೇಲಕ್ಕೆ ನಿರ್ಬಂಧ: ಅವುಲಬೆಟ್ಟಕ್ಕೆ ದಿನೇ ದಿನೆ ಪ್ರವಾಸಿಗರು ಹೆಚ್ಚಾಗುತ್ತಿದ್ದ ಕಾರಣ ಬೆಟ್ಟದ ಬುಡದಲ್ಲೇ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಿದ್ದು, ಬೆಟ್ಟದ ಮೇಲೆ ಹೋಗಲು ವಾಹನಗಳಿಗೆ ನಿರ್ಬಂಧ ಏರಲಾಗಿದೆ.

ದೇವಸ್ಥಾನಕ್ಕೂ ನಿರ್ಬಂಧ: ಅವುಲಬೆಟ್ಟದ ಮೇಲಿರುವ ನರಸಿಂಹ ದೇವರ ‌ದೇವಸ್ಥಾನಕ್ಕೂ ಪ್ರವೇಶ ನಿಷೇಧಿಸಿದು, ಭಕ್ತರಿಗೆ ದೇವರ ದರ್ಶನಕ್ಕೆ ಪ್ರವೇಶವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next