Advertisement

ಯೋಜನೆಗಳ ಲಾಭ ಪಡೆಯಿರಿ; ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಗೆ ಅರ್ಜಿ ಸಲ್ಲಿಸಿ

05:54 PM Jul 09, 2022 | Team Udayavani |

ಮೂಡಲಗಿ: ರೈತ ಉತ್ಪಾದಕರ ಸಂಸ್ಥೆಗಳು ರೈತರಿಂದ ರೈತರಿಗಾಗಿ ರೈತರೇ ನಡೆಸ್ಪಲಡುವ ಒಂದು ಒಕ್ಕೂಟವಾಗಿದೆ. ಸರ್ಕಾರದ ಯೋಜನೆಗಳನ್ನು ರೈತರಿಗೆ ಮುಟ್ಟಿಸುವಲ್ಲಿ ರೈತ ಉತ್ಪಾದಕ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಗೋಕಾಕ-ಮೂಡಲಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಂ.ನದಾಫ ಹೇಳಿದರು.

Advertisement

ಅವರು ಮೂಡಲಗಿ ರೈತ ಉತ್ಪಾದಕ ಸಂಸ್ಥೆ ಹಾಗೂ ಮುರಗೋಡದ ರೂರಲ್‌ ಡೆವೆಲಪಮೆಂಟ್‌ ಸೊಸೈಟಿ ಸಹಯೋಗದಲ್ಲಿ ಕಮಲದಿನ್ನಿ ಗ್ರಾಮದಲ್ಲಿ ಪ್ರಮುಖ ರೈತರ ತರಬೇತಿ ಹಾಗೂ ಶೇರು ಬಲವರ್ಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿ ಇಲಾಖೆಯಿಂದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಜಾರಿಯಾಗಿದ್ದು, ಅದರ ಪ್ರಕಾರ ಸಾವಯವ ಬೆಲ್ಲ ತಯಾರು ಮಾಡಲು ಆಸಕ್ತ ರೈತರು ಅರ್ಜಿ ಸಲ್ಲಿಸಬಹುದು. ರೈತರು ಬ್ಯಾಂಕುಗಳಿಗೆ ಬೇಕಾಗುವ ದಾಖಲೆಗಳನ್ನು ನೀಡಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.ಹಾಗೂ ಪ್ರಧಾನ ಮಂತ್ರಿ ಕಿರು ಆಹಾರ ಸಂರಕ್ಷಣಾ ಯೋಜನೆ ಕೂಡಾ ಜಾರಿಯಿದ್ದು, ಈ ಯೋಜನೆಯು ಆಹಾರ ಘಟಕಗಳನ್ನು ಸ್ಥಾಪಿಸಿಕೊಳ್ಳಲು ಅನೂಕೂಲವಾಗಿದೆ.

ರೊಟ್ಟಿ ಮಾಡುವುದು, ಸಂಡಿಗೆ, ಹಪ್ಪಳ,ಉಪ್ಪಿನಕಾಯಿ, ಹಿಟ್ಟು ಬೀಸುವ ಗಿರಣಿ ಹೀಗೆ ಇನ್ನೂ ಹಲವಾರು ಘಟಕ ಮಾಡಬಹುದಾಗಿದೆ. ಆದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಶೇರುದಾರರಾಗಿ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶ್ರೀಶೈಲ ಢೋಣಿ ಮಾತನಾಡಿ, ಪ್ರಧಾನ ಮಂತ್ರಿ ಕಿರು ಆಹಾರ ಸಂರಕ್ಷಣಾ ಯೋಜನೆ ಹಾಗೂ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗಳು ರೈತರಿಗೆ ವರದಾನವಾಗಿವೆ. ಇವುಗಳ ಉಪಯೋಗದಿಂದ ಸ್ವ ಸಹಾಯ ಸಂಘಗಳ ಸದಸ್ಯರ ಹಾಗೂ ರೈತರ ಜೀವನ ಮಟ್ಟ ಸುಧಾರಿಸುವುದಲ್ಲದೇ ಸ್ವಾವಲಂಬಿಗಳಾಗಬಹುದು ಎಂದರು. ರಾಮಪ್ಪಾ ಕರೆಮ್ಮಿ ಮಾತನಾಡಿದರು.

ಮೂಡಲಗಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಆನಂದ ಸುಳ್ಳನವರ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ರೈತ ಉತ್ಪಾದಕ ಕಂಪನಿಯನ್ನು ನಮ್ಮ ಗ್ರಾಮಗಳಿಗೆ ನೀಡಿದ್ದು, ಇಂತಹ ಕಂಪನಿಗಳನ್ನು ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಾಧ್ಯವಾಗುತ್ತದೆ. ರೈತರಿಂದ ಖರೀದಿ ಸಿ ನೇರ ಮಾರಾಟ ಮಾಡಲು ಹಾಗೂ ರೈತರಿಗೆ ಅವಶ್ಯವಿರುವ ವಸ್ತಗಳನ್ನು ನೇರವಾಗಿ ಯೋಗ್ಯದರದಲ್ಲಿ ಮುಟ್ಟಿಸುವಲ್ಲಿ ದಿಟ್ಟ ಹೆಜ್ಜೆಯಿಟ್ಟಿವೆ
ಎಂದು ಹೇಳಿದರು.

Advertisement

ಕೃಷಿ ಅಧಿಕಾರಿ ಬಿ.ಪಿ. ಹಿರೇಮಠ, ಎ.ಎ.ಒ ವಿಠಲ ಸನದಿ, ಶಂಕರ ಗೋಡಿಗೌಡರ, ವಿಠuಲ ಸಂಕನ್ನವರ, ಕಲ್ಲಪ್ಪಾ ಮನಗೂಳಿ, ಬಸಪ್ಪಾ ಕೌಜಲಗಿ, ಬಸಪ್ಪಾ ಸಂಕನ್ನವರ, ಶ್ರೀಮಂತ ಹುಚ್ಚರಡ್ಡಿ, ಮುದಕಪ್ಪ ಕೆಂಚರಡ್ಡಿ, ಹನಮಂತ ಹುಚ್ಚರಡ್ಡಿ, ಯಮನಪ್ಪ ಮಂಟನವರ, ರಾಮಣ್ಣ ಪಾಟೀಲ, ಶಿವರೆಡ್ಡಿ ಹುಚ್ಚರಡ್ಡಿ, ಬಸು ಬಡಗನ್ನವರ, ಈರಪ್ಪಾ ಜನಗನ್ನವರ, ಗೊವಿಂದ ಹುಚ್ಚರಡ್ಡಿ, ಕೃಷ್ಣಪ್ಪಾ ಸೊನ್ನದ, ಈರಪ್ಪಾ ಸಂಕನ್ನವರ ಹಾಗೂ ಗ್ರಾಮದ ಪ್ರಮುಖ ರೈತರು
ಉಪಸ್ಥಿತರಿದ್ದರು. ಭಾಗ್ಯಶ್ರೀ ಹೊಸೂರ ನಿರೂಪಿಸಿದರು. ಮಲ್ಲಪ್ಪ ಮಗದುಮ ಸ್ವಾಗತಿಸಿದರು. ಸಂತೋಷ ಗೊಲಬಾವಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next