Advertisement
ಹಳ್ಳಿಯ ಜನರು ಈಗ ತುಂಬ ಸುಲಭವಾಗಿ ಮೊಬೈಲ್ ತಂತ್ರಜಾnನಗಳನ್ನು ಬಳಸಬಲ್ಲರು.ಆಟೋಮೊಬೈಲ್ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಆಟೋಮೊಬೈಲ್ ಕ್ಷೇತ್ರ ಎಷ್ಟರ ಮಟ್ಟಿಗೆ ಬದಲಾಗುತ್ತಿದೆ ಎಂದರೆ ಇತ್ತೀಚೆಗೆ ಸುರಕ್ಷತಾ ತಂತ್ರಜಾnನಗಳನ್ನು ಸಾಮಾನ್ಯ ಕಾರುಗಳಲ್ಲಿಯೂ ಅಳವಡಿಸಿಕೊಡಲಾಗುತ್ತಿದೆ. ಬಹುತೇಕ ಕಾರು ಕಂಪನಿಗಳು ಇದನ್ನು ಅತಿ ಸುಲಭ ಎನ್ನುವಂತೆ ಬಳಕೆದಾರರ ಸ್ನೇಹಿಯಾಗಿಸುತ್ತಿವೆ. ಅತ್ಯುತ್ತಮ ಈ ಮಾತಿಗೆ ಉದಾಹರಣೆ ಕೊಡುವುದಾದರೆ, ಸೆಂಟರ್ ಲಾಕ್. ಈ ಹಿಂದೆ ಕಾರ್‌ಗೆ ಸೆಂಟರ್ ಲಾಕ್ ಇದೆ ಎನ್ನುವುದೇ ಒಂದು ಅಚ್ಚರಿ ಎನ್ನುವಂತೆ ನೋಡಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಶೋ ರೂಂನಿಂದ ಮಾರುಕಟ್ಟೆಗೆ ಬರುವ ಪ್ರತಿಯೊಂದು ಕಾರು, ವೇರಿಯಂಟ್‌ಗಳಲ್ಲಿ ಇದು ಕಾಮನ್ ಎನ್ನುವಂತೆ ಆಗಿದೆ. ತಂತ್ರಜಾnನ ಅಷ್ಟರಮಟ್ಟಿಗೆ ಆವರಿಸಿಕೊಳ್ಳುತ್ತಿದೆ.
ಹತ್ತಾರು ವರ್ಷಗಳಿಂದೀಚೆಗೆ ಬಹುತೇಕ ವಾಹನ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನೆಗಳ ಕಾರ್ಯವಿಧಾನವನ್ನೇ ಬದಲಾಯಿಸಿಕೊಂಡಿವೆ. ವಿಶೇಷವಾಗಿ ಭಾರತ, ಚೀನಾ, ಜರ್ಮನಿ, ಜಪಾನ್, ಅಮೆರಿಕ, ಕೊರಿಯಾ ಕಂಪನಿಗಳು ಮಾಡಿಕೊಂಡಿರುವ ಬದಲಾವಣೆಗಳು ಶ್ಲಾಘನೀಯ. ಆಟೋಮೊಬೈಲ್ ಉತ್ಪಾದನೆಯಲ್ಲಿನ ನಿರೀಕ್ಷೆಗಳನ್ನು ಬಹುತೇಕ ಕಂಪೆನಿಗಳು ದುಪ್ಪಟ್ಟುಗೊಳಿಸುತ್ತಾ ಬಂದಿವೆ. ತಂತ್ರಜಾnನ ಅಳವಡಿಕೆಗೆಂದೇ ಪ್ರತ್ಯೇಕ ವಿಭಾಗಗಳನ್ನು ಸ್ಥಾಪಿಸಿಕೊಂಡಿವೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಪರಿಚಯಗೊಂಡ ದ್ವಿಚಕ್ರ ಮತ್ತು ಚತುರ್ಚಕ್ರ ವಾಹನಗಳಲ್ಲಿ ಆಗಿರುವ ಗಮನಾರ್ಹ ಬದಲಾವಣೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಗ್ರಾಹಕನ ನಿರೀಕ್ಷೆಗಿಂತಲೂ ಲೇಟೆಸ್ಟ್ ಎನ್ನಿಸುವ ತಂತ್ರಜಾnನಗಳು ಅಳವಡಿಕೆಯಾಗಿರುತ್ತವೆ. ದ್ವಿಚಕ್ರಗಳಿಗಿಂತ ಉಳಿದ ವಾಹನಗಳಲ್ಲಿ ಈ ಬದಲಾವಣೆಗಳನ್ನು ಹೆಚ್ಚೆಚ್ಚು ಕಾಣಲು ಸಾಧ್ಯ. ಒಂದಿಷ್ಟು ಹೊಸತನ, ಹೊಸ ಕಲ್ಪನೆ, ಹೊಸ ವಿನ್ಯಾಸಗಳನ್ನು ಅಳವಡಿಸುವುದರ ಜೊತೆಗೆ, ಸುರಕ್ಷತೆ ಮತ್ತು ಮನರಂಜನೆ ದೃಷ್ಟಿಯಿಂದಲೂ ಒಂದಿಷ್ಟು ತಂತ್ರಜಾnನಗಳನ್ನು ಅಳವಡಿಸಲಾಗುತ್ತದೆ.
Related Articles
Advertisement
ಮುಂದಿನ ಸಂಚಿಕೆಯಲ್ಲಿ ಹೈ-ಡ್ರೈವ್2
– ಅಗ್ನಿಹೋತ್ರಿ