ನವದೆಹಲಿ: ಭಾರತದಲ್ಲಿ ಕಳೆದೈದು ವರ್ಷಗಳಿಂದೀಚೆಗೆ ಸ್ಪೋರ್ಟ್ಸ್ ಯೂಟಿಲಿಟಿ ವೆಹಿಕಲ್‌ಗಳ (ಎಸ್‌ಯುವಿ) ಹಾಗೂ ಮಲ್ಟಿ ಯೂಟಿಲಿಟಿ ವೆಹಿಕಲ್‌ಗಳ (ಎಂಯುವಿ) ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮತ್ತೂಂದೆಡೆ, ಇದೇ ಅವಧಿಯಲ್ಲಿ ಈ ಹಿಂದೆ ಭಾರೀ ಬೇಡಿಕೆಯಲ್ಲಿದ್ದ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳ ಬೇಡಿಕೆ ಕ್ರಮೇಣ ಕುಸಿಯಲಾರಂಭಿಸಿದೆ.
2021-22ರಲ್ಲೂ ಎಸ್‌ಯುವಿ, ಎಂಯುವಿ ಕಾರುಗಳ ಹವಾ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಆಟೋಮೊಬೈಲ್ ತಯಾರಕರ ಸೊಸೈಟಿ (ಎಸ್‌ಐಎಎಂ) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, 2021ರ ಮಾರ್ಚ್-ಏಪ್ರಿಲ್‌ನಲ್ಲಿ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳ ಬೆಲೆ ಶೇ. 9.06ರಷ್ಟು ಕುಸಿತ ಕಂಡಿದ್ದರೆ, ಅದೇ ಅವಧಿಯಲ್ಲಿ ಯೂಟಿಲಿಟಿ ವಾಹನಗಳ (ಯು.ವಿ) ಬೇಡಿಕೆ ಶೇ. 12.13ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ :ರಂಜಾನ್‍ಗೆ ಜನ ಸೇರುವುದನ್ನು ನಿಷೇಧಿಸಿ ಎಂದು ಪ್ರಧಾನಿಗೆ ನಟಿ ಕಂಗನಾ ಒತ್ತಾಯ
ಎಸ್‌ಐಎಎಂ ಬಿಡುಗಡೆ ಮಾಡಿರುವ ಮತ್ತೂಂದು ಅಂಕಿ-ಅಂಶಗಳ ಪ್ರಕಾರ, 2019-20ರ ಹಣಕಾಸು ವರ್ಷದ ಕಡೆಯ ತ್ತೈಮಾಸಿಕದಲ್ಲಿ (2020ರ ಜನವರಿಯಿಂದ ಮಾರ್ಚ್ ಅವಧಿ) ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟ ಶೇ. 74.14ರಷ್ಟಿದ್ದಿದ್ದು, 2020-21ರ ಹಣಕಾಸು ವರ್ಷದ ಅಂತಿಮ ತ್ತೈಮಾಸಿಕ ಅವಧಿಯಲ್ಲಿ (2021ರ ಜನವರಿಯಿಂದ ಮಾರ್ಚ್‌ವರೆಗಿನ) ಶೇ. 27.11ಕ್ಕೆ ಇಳಿದಿದೆ. ಎಂಯುವಿಗಳಿಗೆ ಹೋಲಿಸಿದರೆ ಎಸ್‌ಯುವಿಗಳ ಮಾರಾಟವೇ ಹೆಚ್ಚು ಎಂದು ಹೇಳಲಾಗಿದೆ.