Advertisement

ರೆನೋ ಕ್ವಿಡ್‌ ಮಾಲೀಕರಿಗಾಗಿ ರೆನೋ ಕ್ವಿಡ್‌ ಮೈಲೇಜ್‌ ರ‍್ಯಾಲಿ

10:18 AM Dec 07, 2021 | Team Udayavani |

ಬೆಂಗಳೂರು: ಭಾರತದ ಕಾರು ಮಾರುಕಟ್ಟೆ ಯಲ್ಲಿ ಛಾಪು ಮೂಡಿಸಿರುವ ರೆನಾಲ್ಟ್ ತನ್ನ ರೆನೋ ಕ್ವಿಡ್‌ ಮಾಲೀಕರಿಗಾಗಿ “ರೆನೋ ಕ್ವಿಡ್‌ ಮೈಲೇಜ್‌ ರ್ಯಾಲಿ’ಯನ್ನು ಹಮ್ಮಿ ಕೊಂಡಿತ್ತು.ಯಶವಂತಪುರದ ರೆನಾಲ್ಟ್ ಶೋ ರೂಂ ಏರ್ಪಡಿಸಿದ್ದ ರ್ಯಾಲಿಯಲ್ಲಿ ಸುಮಾರು 22 ಗ್ರಾಹಕರು ಭಾಗವಹಿಸಿ ರೆನೋ ಕ್ವಿಡ್‌ ಅತ್ಯುತ್ತಮ ಮೈಲೇಜ್‌ ನೀಡುತ್ತದೆ ಎಂಬುದನ್ನು ಸಾಬೀತು ಮಾಡಿದರು.

Advertisement

ರೆನೋ ಕ್ವಿಡ್‌ ಮೈಲೇಜ್‌ ರ್ಯಾಲಿಯಲ್ಲಿ ಭಾಗವಹಿಸಿದ್ದ ಅಗ್ರ ಮೂವರು 37.35 ಕಿ.ಮೀ ಪ್ರ.ಲೀ ಅತ್ಯುತ್ತಮ ಸರಾರಿಯನ್ನು ವರದಿ ಮಾಡಿದ್ದಾರೆ. ಇದರೊಂದಿಗೆ ಅತ್ಯುತ್ತಮ ವಿನ್ಯಾಸ,ನಾವಿನ್ಯತೆ ಜತೆಗೆ ಉತ್ತಮ ಮೈಲೇಜ್‌ ನೀಡುತ್ತದೆ ಎಂಬುದು ಕ್ವಿಡ್‌ ಸಾಭೀತು ಪಡಿಸಿದೆ. ರೆನೋ ಕ್ವಿಡ್‌ ಇತ್ತೀಚೆಗೆ ಭಾರತದಲ್ಲಿ 4 ಲಕ್ಷ ಮಾರಾಟದ ಮೈಲುಗಳನ್ನು ದಾಟಿದೆ.

ಆ ಹಿನ್ನೆಲೆಯಲ್ಲಿಯೇ ತನ್ನೆಲ್ಲ ಗ್ರಾಹಕರಿಗಾಗಿ ರೆನೋ ಕ್ವಿಡ್‌ ಮೈಲೇಜ್‌ ರ್ಯಾಲಿಯನ್ನು ಬೆಂಗಳೂರಿನಲ್ಲಿ ಆಯೋಜಿ ಸಿತ್ತು. ರೆನೋ ಕ್ವಿಡ್‌ ರ್ಯಾಲಿ ಬಗ್ಗೆ ಮೆಚ್ಚುಗೆಯನ್ನು ಕೂಡ ಗ್ರಾಹಕರ ವ್ಯಕ್ತಪಡಿಸಿದ್ದಾರೆ. ಗ್ರಾಹಕರಿಗಾಗಿಯೇ ವರ್ಚುವಲ್‌ ಸ್ಟೂಡಿ ಯೋವನ್ನು ಪರಿಚಯಿಸಿದ್ದು ಗ್ರಾಹಕರು ತಮ್ಮ ಮನೆಯಿಂದಲೇ ಸಂವಾದಾತ್ಮಕ ವರ್ಚುವಲ್‌ ಸ್ಟೂಡಿಯೋ ಮೂಲಕ ಕ್ವಿಡ್‌ನ‌ ಪ್ರಮುಖ ವೈಶಿಷ್ಟ್ಯಗಳನ್ನು ಅನುಭವಿಸಬಹುದಾಗಿದೆ.

ಇದನ್ನೂ ಓದಿ:- ಉಳವಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಹಳಿಯಾಳದಲ್ಲಿ ಘೋಟ್ನೇಕರ ಆಗ್ರಹ

ರೆನೋ ಕ್ವಿಡ್‌ ಅನ್ನು ವಿಶೇಷವಾಗಿ ಭಾರ ತೀಯ ಖರೀದಿದಾರರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಇದು ಭಾರತೀಯ ಕೌಶಲ್ಯ ಮತ್ತು ಪರಿಣಿತಿಗೆ ಪೂರಕವಾಗಿದೆ.ಮೇಕ್‌ ಇನ್‌ ಇಂಡಿಯಾ ಕಾರ್ಯ ಕ್ರಮದ ಸಿದ್ಧಾಂತವನ್ನು ರೆನೋ ಕ್ವಿಡ್‌ ಬಲವಾಗಿ ಪ್ರತಿ ಪಾಧಿಸುತ್ತದೆ. ರೆನೋ ಕ್ವಿಡ್‌ ದೇಶಾದ್ಯಂತ ರೆನಾಲ್ಟ್ ಬ್ರ್ಯಾಂಡ್‌ನ‌ ಬೆಳವಣಿಗೆ ಯಲ್ಲಿ ಪ್ರಮುಖವಾದ ಪಾತ್ರವಹಿಸಿದೆ.

Advertisement

ರೆನೋ ಕ್ವಿಡ್‌ನ‌ ಎಸ್‌ಯುವಿ ಪ್ರೇರಿತ ವಿನ್ಯಾಸ ಮತ್ತು ಶ್ರೇಣಿಯಲ್ಲೆ ಪ್ರಥಮ 20.32 ಸೆಂ. ಮೀ ಟಚ್‌ ಸ್ಕ್ರೀನ್‌ ಮೀಡಿಯಾ, ಆ್ಯಂಡ್ರಾಯ್ಡ ಆಟೋ, ಆ್ಯಪಲ್‌ ಕಾರ್‌ ಪ್ಲೇ ಹೊಂದಿದ್ದು ಪ್ಲೋರ್‌ ಕನ್ಸೋಲ್‌-ಮೌಂಟೆಡ್‌ ಎಎಂಟಿ ಡಯಲ್‌ ಡ್ರೈವಿಂಗ್‌ ಅನ್ನು ಮತ್ತಷ್ಟು ಸುಲಭವಾಗಿಸುತ್ತದೆ. ತನ್ನ 10 ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ರೆನಾಲ್ಟ್ ಇತ್ತೀಚೆಗೆ ನೂತನ ಕ್ವಿಡ್‌ ಎಂವೈ 21 ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಜತೆಗೆ ರೆನೋ ತನ್ನೆಲ್ಲಾ ಕ್ವಿಡ್‌ ಗ್ರಾಹಕರಿಗೆ ಬಿಡಿಭಾಗ ಗಳ ಮತ್ತು ಪರಿಕರಗಳ ಮೇಲೆ ಶೇ.10ರಷ್ಟು ರಿಯಾಯಿತಿ ಮತ್ತು ಕೂಲಿ ಶುಲ್ಕಗಳಲ್ಲಿ ಶೇ.20ರಷ್ಟು ರಿಯಾಯ್ತಿ ಸೇರಿದಂತೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next