Advertisement
ಕನಿಷ್ಠ ಬಾಡಿಗೆ ದರ (ಮೊದಲ 2 ಕಿ.ಮೀ.ಗೆ)ವನ್ನು 25ರಿಂದ 30 ರೂ.ಗೇರಿಸಲಾಗಿದೆ. ಮೂವರು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರಲಿದೆ. 2 ಕಿ.ಮೀ. ಅನಂತರದ ಪ್ರತಿ ಕಿ.ಮೀ.ಗೆ 15 ರೂ. ದರ ನಿಗದಿಪಡಿಸಲಾಗಿದೆ. ಪ್ರಸ್ತುತ 13 ರೂ. ಇದೆ.
ಬೆಂಗಳೂರಿನ ಹಲವು ಹೊಟೇಲ್ಗಳಲ್ಲಿ ಸೋಮವಾರ ತಿಂಡಿಗಳ ದರ ಏರಿಕೆಯಾಗಿದೆ. ಊಟ ಮತ್ತು ಮಸಾಲೆ ದೋಸೆ 10 ರೂ. ತುಟ್ಟಿಯಾಗಿದೆ. ಕಾಫಿ, ಚಾ, ಕೇಸರಿಬಾತ್, ಚೌಚೌ ಬಾತ್, ತಟ್ಟೆ ಇಡ್ಲಿ, ರವೆ ಇಡ್ಲಿ ಮುಂತಾದವು 2 ರೂ., ಪೂರಿ, ಪಕೋಡಾ, ರೈಸ್ ಬಾತ್, ಸೆಟ್ದೋಸೆ ಮತ್ತಿತರ ಆಹಾರ ಪದಾರ್ಥಗಳ ಬೆಲೆಯಲ್ಲಿ 3 ರಿಂದ 5ರೂ. ಹೆಚ್ಚಳ ಮಾಡಲಾಗಿದೆ. ಇದನ್ನೂ ಓದಿ:12ರ ವರೆಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
Related Articles
Advertisement