ನವದೆಹಲಿ: ನೀವು ಮೊಬೈಲ್ ಬಿಲ್, ನೆಟ್ ಫ್ಲಿಕ್ಸ್- ಅಮೆಜಾನ್‌ನಂತಹ ಒಟಿಟಿ ಸೇವೆಗಳು ಹಾಗೂ ಇತರೆ ಬಿಲ್‌ಗಳನ್ನು ಆಟೋಮ್ಯಾಟಿಕ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿಸುತ್ತಿ ದ್ದೀರಾ? ಹಾಗಿದ್ದರೆ ಏಪ್ರಿಲ್ ತಿಂಗಳಲ್ಲಿ ನೀವು ಭಾರೀ ಸಮಸ್ಯೆ ಎದುರಿಸ ಬೇಕಾಗಬಹುದು! ಹೌದು. ಗ್ರಾಹಕರ ಆಟೋ ಮ್ಯಾಟಿಕ್ ಪಾವತಿಗೆ ಸಂಬಂಧಿಸಿ ಹೆಚ್ಚುವರಿ ದೃಢೀಕರಣ ನಿಯಮವನ್ನು ಜಾರಿಗೆ ತಂದಿದ್ದ ಆರ್‌ಬಿಐ, ಮಾ.31ರೊಳಗಾಗಿ ಎಲ್ಲ ಬ್ಯಾಂಕುಗಳು, ಕಾರ್ಡ್ ಜಾಲಗಳು ಹಾಗೂ ಆನ್ ಲೈನ್ ವರ್ತಕರು ಇದನ್ನು ಅನುಸರಿ ಸುವಂತೆ ಹಾಗೂ ಅದಕ್ಕೆ ತಕ್ಕಂತೆ ಸಿಸ್ಟಂಗಳನ್ನು ಮೇಲ್ದರ್ಜೆಗೇರಿಸುವಂತೆ ಸೂಚಿಸಿದೆ. ಆದರೆ, ಬಹುತೇಕ ಬ್ಯಾಂಕುಗಳು ಹಾಗೂ ಇತರೆ ನೆಟ್ ವರ್ಕ್‌ಗಳು ಇದನ್ನು ಇನ್ನೂ ಜಾರಿ ಮಾಡಿಲ್ಲ. ಹೀಗಾಗಿ, ಏಪ್ರಿಲ್ ಆರಂಭವಾಗುತ್ತಿದ್ದಂತೆ ಗ್ರಾಹಕರ ಖಾತೆಯಿಂದ ಆಟೋಮ್ಯಾಟಿಕ್ ಪೇಮೆಂಟ್ ಸ್ಥಗಿತಗೊಳ್ಳುವುದು ಖಚಿತ. ಗ್ರಾಹಕರು ಪ್ರತಿಯೊಬ್ಬ ವರ್ತಕನ ಪೇಮೆಂಟ್ ಪೇಜ್‌ಗೆ ಭೇಟಿ ನೀಡಿ, ಬಿಲ್ ಪಾವತಿ ಮಾಡ ಬೇಕಾಗುತ್ತದೆ.
ಓದಿ : ಬಸವಕಲ್ಯಾಣದಲ್ಲಿ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ
ಏನಿದು ನಿಯಮ ?
ಗ್ರಾಹಕರ ಖಾತೆಯಿಂದ ಹಣ ಕಡಿತಗೊಳ್ಳುವ 5 ದಿನಗಳ ಮುಂಚಿತ ವಾಗಿ ಬ್ಯಾಂಕುಗಳು ಆ ಗ್ರಾಹಕರಿಗೆ ನೋಟಿಫಿಕೇಷನ್ ಕಳುಹಿಸಬೇಕು. ಗ್ರಾಹಕ ಅದಕ್ಕೆ ಸಮ್ಮತಿಸಿದ ಬಳಿಕವೇ ಹಣ ಕಡಿತಗೊಳ್ಳಬೇಕು. ಅದರಲ್ಲೂ, 5 ಸಾವಿರ ರೂ.ಗಿಂತ ಹೆಚ್ಚಿನ ಪಾವತಿ ಆಗಬೇಕಿದ್ದರೆ, ಗ್ರಾಹಕರಿಗೆ ಬ್ಯಾಂಕು ಒನ್ ಟೈಂ ಪಾಸ್ ವರ್ಡ್ ಅನ್ನೂ ರವಾನಿಸಬೇಕು ಎನ್ನುವುದು ಆರ್ ಬಿ ಐ ಹೊಸ ನಿಯಮ.
ಯಾವುದರ ಮೇಲೆ ಪರಿಣಾಮ?
ಕ್ರೆಡಿಟ್-ಡೆಬಿಟ್ ಕಾರ್ಡ್, ಒಟಿಟಿ, ಮಾಧ್ಯಮ ಚಂದಾದಾರಿಕೆ, ಯುಟಿಲಿಟಿ ಬಿಲ್‌ಗಳು, ಎಂಎಸ್‌ಎಂಇ, ಕಾರ್ಪೊರೇಟ್‌ಗಳ ಪಾವತಿ ಸೇರಿದಂತೆ ಸುಮಾರು 2 ಸಾವಿರ ಕೋಟಿ ರೂ.ಗಳ ಪಾವತಿ ಮೇಲೆ ಪರಿಣಾಮ ಬೀರಲಿದೆ. ಆದರೆ, ಎನ್ ಪಿಸಿಐ ಪಾವತಿ ವಿಧಾನದ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ.
ಓದಿ : ನಾಗಚೈತನ್ಯಗೆ ಜೋಡಿಯಾದ ಪಟಾಕಿ ಪೋರಿ ನಭಾ ನಟೇಶ್