Advertisement

ಆಟೋ ಮೀಟರ್‌ ಪ್ರಮಾಣ ಪತ್ರ: ಹಳೆ ಆದೇಶ ವಾಪಸ್‌

11:42 PM Sep 21, 2022 | Team Udayavani |

ಬೆಂಗಳೂರು: ಆಟೋ ಮೀಟರ್‌ ಪ್ರಮಾಣ ಪತ್ರಕ್ಕೆ ಸಂಬಂಧಿಸಿ 2020-21ರಲ್ಲಿ ಹೊರಡಿಸಿರುವ ಆದೇಶವನ್ನು ವಾಪಸ್‌ ಪಡೆದಿದ್ದೇವೆ. ಹೀಗಾಗಿ ಆಟೋ ಚಾಲಕರಿಗೆ ಈ ಸಮಸ್ಯೆಯಾಗುತ್ತಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಸದಸ್ಯ ವೇದವ್ಯಾಸ ಕಾಮತ್‌ ಅವರು, ಮಂಗಳೂರು ನಗರ, ಸುರತ್ಕಲ್‌, ಗುರುಪುರ ಹೋಬಳಿ ವ್ಯಾಪ್ತಿಯ ಆಟೋ ರಿಕ್ಷಾ ಮೀಟರ್‌ಗಳ ಪ್ರಮಾಣ ಪತ್ರಕ್ಕೆ ಮೂಡಬಿದಿರೆ ತನಕ ಹೋಗಬೇಕಾಗಿದೆ. ಸುಮಾರು 40 ಕಿ.ಮೀ. ಕ್ರಮಿಸುವುದರಿಂದ ಆಟೋ ಚಾಲಕರಿಗೆ ಆರ್ಥಿಕ ಹೊರೆಯಾಗುತ್ತಿದೆ.

ಈ ಹಿಂದಿನಂತೆ ಮಂಗಳೂರಿನಲ್ಲಿರುವ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಯಲ್ಲೇ ಮುದ್ರಿಸಿ ಆಟೋ ರಿಕ್ಷಾ ಚಾಲಕರಿಗೆ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಂಬಂಧ ಈಗಾಗಲೇ ಕ್ರಮ ತೆಗೆದುಕೊಂಡು, ಹಿಂದಿನ ಆದೇಶ ವಾಪಸ್‌ ಪಡೆದಿದ್ದೇವೆ ಎಂದು ಸಚಿವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next