Advertisement
ತಮ್ಮ ಆತ್ಮೀಯರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟುತ್ತಿದೆ. ಒಂದೆಡೆ ಪುನಃ ಸಂಪೂರ್ಣ ಲಾಕ್‌ಡೌನ್ ಮಾಡಬೇಕು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ. ಇನ್ನೊಂದೆಡೆ ಲಾಕ್‌ಡೌನ್ ಆದರೆ ಜೀವನ ನಡೆಸುವುದು ಹೇಗೆ ಎಂಬ ಭಯ ಸಾಮಾನ್ಯ ಜನರನ್ನು ಕಾಡುತ್ತಿದೆ. ಸರಕಾರವು ಈ ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಡುತ್ತಿದೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದಾಗ ಸರಕಾರ ಮತ್ತು ಜನರ ನಿರ್ಲಕ್ಷ್ಯ, ಅಸಡ್ಡೆ ಹಾಗೂ ಅತಿರೇಕದ ನಡೆ, ಧೋರಣೆಗಳು ಈ ಎಲ್ಲ ಅವಾಂತರಕ್ಕೆ ಕಾರಣ ಎಂದರೆ ಅದು ಅತಿಶಯೋಕ್ತಿಯಾಗಲಾರದು. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಪ್ರತಿಯೊಬ್ಬ ನಾಗರಿಕ ಮತ್ತು ನಮ್ಮನ್ನಾಳುವವರ ಮನಃಸ್ಥಿತಿ ಕೂಡ ಬದಲಾಗಬೇಕಿದೆ.
Related Articles
ಕೊರೊನಾ ನಿಯಂತ್ರಣಕ್ಕೆ ಬರಬೇಕಾದರೆ ವೇಗವಾಗಿ ಸೋಂಕಿತರ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಬಹುತೇಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹೆದರುತ್ತಿದ್ದಾರೆ. ಇದರಿಂದ ಸೋಂಕಿತರನ್ನು ಪತೆ¤ಹಚ್ಚಲು ಸಾಧ್ಯವಾಗುತ್ತಿಲ್ಲ. ಅದಲ್ಲದೇ ಕೋವಿಡ್ ಸೋಂಕು ಯಾವಾಗ ಬಂದು ನಮ್ಮ ದೇಹ ಸೇರುತ್ತದೆ ಎನ್ನುವುದನ್ನು ನಿರೀಕ್ಷೆ ಮಾಡಲು ಅಸಾಧ್ಯವಾಗಿರುತ್ತದೆ. ಆದುದರಿಂದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಕನಿಷ್ಠ ತಿಂಗಳಿಗೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಕೊರೊನಾವನ್ನು ನಿಯಂತ್ರಣಕ್ಕೆ ತರಬಹುದಾಗಿದೆ.
Advertisement
ಕಡ್ಡಾಯವಾಗಿ ಲಸಿಕೆ ಪಡೆಯುವುದು” ಸದ್ಯಕ್ಕೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ತಿಂಗಳ ಆರಂಭದಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆಯನ್ನು ನೀಡಲು ಸರಕಾರ ನಿರ್ಧರಿಸಿದೆ. ಆದರೆ ಈಗ ಲಸಿಕೆಯ ಉಪಯೋಗಕ್ಕಿಂತ ಅದರ ಅಡ್ಡ ಪರಿಣಾಮದ ಬಗ್ಗೆ ಎಲ್ಲಡೆ ಚರ್ಚೆಯಾಗುತ್ತಿದೆ. ಇದರಿಂದ ಹೆಚ್ಚಿನವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಸಾಮಾನ್ಯವಾಗಿದೆ. ಯಾವುದೇ ಲಸಿಕೆ ಪಡೆದುಕೊಂಡರೂ ಕೆಲವರಿಗೆ ನೆಗಡಿ, ಜ್ವರ, ತಲೆ ನೋವು, ಚುಚ್ಚು ಮದ್ದು ನೀಡಿದ ಜಾಗದಲ್ಲಿ ನೋವು, ಊತ ಕಾಣಿಸಿಕೊಳ್ಳುತ್ತವೆ. ಇವನ್ನು ಲಸಿಕೆಯ ಅಡ್ಡ ಪರಿ ಣಾಮ ಎನ್ನಲು ಸಾಧ್ಯವಿಲ್ಲ ಎಂದು ನುರಿತ ವೈದರು ಅಭಿಪ್ರಾಯಪ ಟ್ಟಿದ್ದಾರೆ. ಕೋವಿಡ್ ಲಸಿಕೆ ಪಡೆದವರಿಗೂ ಇದೇ ಲಕ್ಷಣ ಕಾಣುತ್ತವೆ ಹೊರತು ಇದನ್ನು ಹೊರತುಪಡಿಸಿ ಬೇರೆ ಲಕ್ಷಣ ಕಾಣುವುದು ತೀರ ಅಪರೂಪವಾಗಿದೆ. ಆದುದರಿಂದ ಒಳ್ಳೆಯ ಉದ್ದೇಶ ಇಟ್ಟುಕೊಂಡು ಕಡ್ಡಾಯವಾಗಿ ಲಸಿಕೆ ಪಡೆಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಅನಗತ್ಯ ಓಡಾಟ ಕಡಿಮೆ ಮಾಡಿ: ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲೂ ಜನರು ಬೇಕಾಬಿಟ್ಟಿಯಾಗಿ ನಗರಗಳಲ್ಲಿ ಓಡಾಡುತ್ತಿರುವುದು ವಿಷಾದನೀಯ. ಜನರ ಅನಗತ್ಯ ಓಡಾಟವೇ ಈ ಸೋಂಕು ಎಲ್ಲ ಕಡೇ ವಾಯುವೇಗದಲ್ಲಿ ಹಬ್ಬಲು ದಾರಿ ಮಾಡಿಕೊಟ್ಟಿದೆ. ಹೆಚ್ಚಿನ ಕಡೆ ಜನರು ಸಾಮಾಜಿಕ ಅಂತರ ವನ್ನು ಕಾಯ್ದುಕೊಳ್ಳುತ್ತಿಲ್ಲ. ಕೋವಿಡ್ ಹರಡ ದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮನೆಯ ಯಾವನೇ ಸದಸ್ಯ ಅನಗತ್ಯವಾಗಿ ಮನೆಯಿಂದ ಹೊರ ಬರದಂತೆ ಕಟ್ಟೆಚ್ಚರವನ್ನು ಪ್ರತೀ ಕುಟುಂಬವು ಸ್ವಯಂ ಪ್ರೇರಿತವಾಗಿ ನಿರ್ಧಾ ರವನ್ನು ತೆಗೆದುಕೊಳ್ಳಬೇಕು. ನಾನು ನನ್ನನ್ನು ನಂಬಿರುವ ಕುಟುಂಬದ ಸದಸ್ಯರ ಆರೋಗ್ಯ ಮತ್ತು ಪ್ರಾಣವನ್ನು ರಕ್ಷಣೆ ಮಾಡಲು ನಾವೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇ ಬೇಕು ಎನ್ನುವ ನಿರ್ಧಾರಕ್ಕೆ ಬರಬೇಕು.
ಸ್ಥಳೀಯ ಸ್ವಯಂಪ್ರೇರಿತ ಟಾಸ್ಕ್ಪೋರ್ಸ್‌ಗಳ ರಚನೆ: ಕೋವಿಡ್ ಬಗ್ಗೆ ಹಲವಾರು ವದಂತಿಗಳು ಕೇಳಿಬರುತ್ತಿವೆ. ಈ ವದಂತಿಗಳಿಗೆ ಕಿವಿಗೊಡದೆ ಪ್ರತಿಯೊಬ್ಬರು ಸರಕಾರ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸ ಲೇಬೇಕು. ಅದಲ್ಲದೇ ಕನಿಷ್ಠ ಪಕ್ಷ ನಮ್ಮ ಮನೆಯ ಅಕ್ಕಪಕ್ಕದ ಪರಿಸರದಲ್ಲಿ ಕೋವಿಡ್-19ರ ಬಗೆಗಿನ ಜಾಗೃತಿ ಯನ್ನು ಮೂಡಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕಿದೆ. ಇದಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಸಮಾನಮನಸ್ಕರ ಸ್ವಯಂಪ್ರೇರಿತ ಟಾಸ್ಕ್ಪೋರ್ಸ್‌ಗಳನ್ನು ರಚಿಸಿ ಕೋವಿಡ್‌ನ ಕರಾಳತೆಯನ್ನು ತಿಳಿಸುವ ಕಾರ್ಯ ಆಗಬೇಕಾಗಿದೆ.
ಆಚರಣೆ, ಸಮಾರಂಭಗಳ ಸ್ವಯಂ ನಿಷೇಧ :ಸರಕಾರ ಧಾರ್ಮಿಕ ಆಚರಣೆ, ಮದುವೆ ಮತ್ತು ಇತರ ಸಮಾರಂಭಗಳಿಗೆ ಇಂತಿಷ್ಟು ಜನ ಇರಬೇಕು ಎಂಬ ಮಿತಿಯನ್ನು ನಿರ್ಧರಿಸಿದರೂ ಸಹ ಒಂದು ಧಾರ್ಮಿಕ ಆಚರಣೆ ಅಥವಾ ಮದುವೆ ಸಮಾರಂಭಗಳಲ್ಲಿ ಭಾಗವಹಿಸದೆ ಇದ್ದಲ್ಲಿ ನಾವು ಕಳೆದುಕೊಳ್ಳುವುದು ಏನು ಇಲ್ಲ. ಆದುದರಿಂದ ಈ ಕೋವಿಡ್ ಮಾರಿ ಸಂಪೂರ್ಣ ಹತೋಟಿಗೆ ಬರುವವರೆಗೆ ನಾವೆಲ್ಲರೂ ಜನ ಸೇರುವ ಧಾರ್ಮಿಕ ಆಚರಣೆ, ಧಾರ್ಮಿಕ ಸ್ಥಳಗಳು, ಮದುವೆ ಸಮಾರಂಭಗಳಿಗೆ ಸ್ವಯಂ ನಿಷೇಧ ಹೇರಿಕೊಳ್ಳುವುದರಿಂದ ಕೊರೊನಾ ಹರಡುವುದಕ್ಕೆ ತಡೆಯೊಡ್ಡಬಹುದು. – ದಿಲೀಪ್ ಕುಮಾರ್ ಸಂಪಡ್ಕ, ಪುತ್ತೂರು