Advertisement

ಲಾರಿ-ಆಟೋ ರಿಕ್ಷಾ ಚಾಲಕರ ಸಂಘದಿಂದ ಪ್ರತಿಭಟನೆ

05:17 PM Feb 09, 2021 | Team Udayavani |

ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಲಾರಿ ಮಾಲೀಕರ ಹಾಗೂ ಸಾಗಾಣಿಕೆದಾರರ ಸಂಘ, ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘದ ವತಿಯಿಂದ ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ  ನಡೆಸಲಾಯಿತು.

Advertisement

ಏರಿಕೆ ಆಗಿರುವ ಡೀಸೆಲ್‌, ಪೆಟ್ರೋಲ್‌ ಬೆಲೆ ಲೀಟರ್‌ಗೆ 50 ರೂ. ಒಳಗೆ ಇಳಿಸಬೇಕು. ಸರಕು ಸಾಗಾಣಿಕೆಗೆ ಕಿಲೋ ಮೀಟರ್‌ ಪ್ರಕಾರ ಸೂಕ್ತ ಬಾಡಿಗೆ ನಿಗದಿ ಮಾಡಬೇಕು. ಹು-ಧಾ ಬೈಪಾಸ್‌ನಲ್ಲಿ ಸ್ಥಳೀಯ ವಾಹನಗಳಿಗೆ ಶುಲ್ಕ ರಹಿತ ಸಂಚರಿಸಲು ಮುಕ್ತ ಅವಕಾಶ ಕಲ್ಪಿಸಬೇಕು. 4 ವರ್ಷಗಳಿಂದ ಆಟೋಗಳ ಪ್ರಯಾಣ ದರ ಪುನರ್‌ ವಿಮರ್ಶಿಸಿಲ್ಲ. ಹೀಗಾಗಿ ಸಭೆ ಕರೆದು ದರ ನಿಗದಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿ ವರ್ಷ ವಾಹನ ವಿಮೆ ಏರಿಕೆ ನಿಲ್ಲಿಸಬೇಕು. ಸರ್ಕಾರ ಟ್ರಕ್‌ ಟರ್ಮಿನಲ್‌ಗೆ ಮೀಸಲಿಟ್ಟ ಜಾಗದಲ್ಲಿ ಟರ್ಮಿನಲ್‌ ನಿರ್ಮಿಸಿ ಟ್ರಾನ್ಸ್‌ಪೊàರ್ಟ್‌ಗಳಿಗೆ ಜಾಗ ಒದಗಿಸಬೇಕು. ಕೋವಿಡ್‌ ಹಿನ್ನೆಲೆಯಲ್ಲಿ ನವೀಕರಣ (ಪಾಸಿಂಗ್‌) ಮಾಡಿಸದ ಆಟೋಗಳಿಗೆ ಯಾವುದೇ ದಂಡ ವಿ ಧಿಸದೆ ನವೀಕರಣಕ್ಕೆ 3 ತಿಂಗಳ ಅವಕಾಶ ನೀಡಬೇಕು. ಆಟೋ ಮೀಟರ್‌ ಗಳಿಗೆ ಹೆಚ್ಚಿನ ದಂಡ ವಿ ಧಿಸುವುದನ್ನು ಕೈಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಸಾಗಣೆ ವಾಹನದ ಮೂಲಕ ಜೀವನ ಸಾಗಿಸುವುದೇ ದುಸ್ತರವಾಗಿದ್ದು, ಇಂತಹ ಸಮಯದಲ್ಲಿ ದುಬಾರಿ ದಂಡ ವಿಧಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ :ಮಕ್ಕಳ ಕಲಿಕಾ ಫಲ ಸಂವರ್ಧನೆಗೆ ಶ್ರಮಿಸಿ

ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ,ಪಿ.ಎಚ್‌. ನೀರಲಕೇರಿ, ಗೈಬುಸಾಬ ಹೊನ್ಯಾಳ, ಗಂಗಾಧರ ಹೊಸಮನಿ, ಶಂಬುಕುಮಾರ ಸುಂಕದ, ಆರ್‌.ಎಸ್‌. ಪಠಾಣ, ಸುನೀಲ ಕಲಾಲ, ಐ.ಎಂ. ಜವಳಿ, ಬಿ.ಎ. ಮುಧೋಳ, ದೇವಾನಂದ ಜಗಾಪುರ, ಬಾಬಾಜಾನ ಮುಧೋಳ, ರಮೇಶ ಬೋಸ್ಲೆ, ಎ.ಎಸ್‌. ಪೀರಜಾದೆ, ಬಶೀರಹ್ಮದ ಮುಲ್ಲಾ, ಸುನೀಲ ಆಗಲಾವಿ, ಅಜೀಮ ಮೊಮೀನ, ಎಂ.ಎಂ. ಬೇಪಾರಿ, ಸುಲೇಮಾನ ಶೇಖ, ಚಂದ್ರಶೇಖರ ಬೆಟಗೇರಿ, ಲಕ್ಷ್ಮಣ ಬಕ್ಕಾಯಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next