Advertisement

ದಾಂಡೇಲಿ: ಮಹಿಳೆಯರಿಗೆ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ: ಸಂಕಷ್ಟದಲ್ಲಿ ಆಟೋ ಚಾಲಕರು

12:30 PM Jun 22, 2023 | Team Udayavani |

ದಾಂಡೇಲಿ: ಮಹಿಳೆಯರಿಗೆ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೌಲಭ್ಯ ದೊರೆತ ನಂತರ ತೀವ್ರ ಸಂಕಷ್ಟ ಎದುರಾಗಿದೆ ಎಂದು ದಾಂಡೇಲಿ ಆಟೋ ಚಾಲಕರು ಮಾಧ್ಯಮದ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Advertisement

ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಎವರ್ ಗ್ರೀನ್ ಆಟೋ ಚಾಲಕರಂತೂ ಇದೀಗ ಬಾಡಿಗೆಯಿಲ್ಲದೆ ಜಾತಕಪಕ್ಷಿಯಂತೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸಾರಿಗೆ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ದೊರೆತ ನಂತರದಲ್ಲಿ ಆಟೋ ರಿಕ್ಷಾಗಳಿಗೆ ಸಿಗುತ್ತಿದ್ದ ದೈನಂದಿನ ಬಾಡಿಗೆ ಸ್ಥಗಿತಗೊಂಡಿದೆ. ಸಾಲ ಮಾಡಿ ಆಟೋ ಖರೀದಿಸಿ, ಆಟೋ ಚಲಾಯಿಸುವ ಮೂಲಕ ಸಂಸಾರವನ್ನು ಸಾಗಿಸುತ್ತಿದ್ದ ಆಟೋ ಚಾಲಕರು ಇದೀಗ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.

ಆಟೋ ಚಾಲಕರು ಮನವಿ ಮಾಡುವ ಪ್ರಕಾರ, ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ನೀಡಿದ್ದಲ್ಲಿ ನಮ್ಮ ಅಭ್ಯಂತರವಿಲ್ಲ. ಅದು ಬಿಟ್ಟು ಎಲ್ಲ ಮಹಿಳೆಯರಿಗೆ ಈ ಸೌಲಭ್ಯವನ್ನು ಕೊಡುವ ಮುಂಚೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿರುವ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರುಗಳ ಬದುಕಿನ ಬಗ್ಗೆಯೂ ರಾಜ್ಯ ಸರಕಾರ ಚಿಂತನೆಯನ್ನು ನಡೆಸಿ, ಅಭದ್ರತೆಯಲ್ಲಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರುಗಳಿಗೆ ಪರ್ಯಾಯ ಮತ್ತು ಯೋಗ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಟೋ ಚಾಲಕರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next