ಉಳ್ಳಾಲ: ಪ್ರವಾಸಿಗರನ್ನು ಸ್ವಾಗತಿಸಿ ಆತ್ಮೀಯ ಸೇವೆ ನೀಡುವ ಆಟೋ ಚಾಲಕರು ಸಮಯ ಪ್ರಜ್ಞೆಯೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಮಾನವೀಯ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಎಸ್‌ವೈಎಸ್ ಕೆ.ಸಿ.ರೋಡ್ ಘಟಕಾಧ್ಯಕ್ಷ ಉಮರಬ್ಬ ಮಾಸ್ಟರ್ ಹೇಳಿದರು.
ಕೆ.ಸಿ.ರೋಡು ಆಟೋ ಚಾಲಕ-ಮಾಲಕರ ಸಂಘ ಹಾಗೂ ಬ್ಲಿಡ್ ಹೆಲ್ಪ್ಕೇರ್ ಕರ್ನಾಟಕದ ಜಂಟಿ ಆಶ್ರಯದಲ್ಲಿ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಸಹಭಾಗಿತ್ವದಲ್ಲಿ ರವಿವಾರ ಕೆ.ಸಿ.ರೋಡ್‌ನಲ್ಲಿ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾನವನಾಗಿ ಹುಟ್ಟಿದ ಬಳಿಕ ಸೇವೆ ನೀಡದಿದ್ದರೆ ಮನುಷ್ಯ ಜೀವನವೇ ನಿಷ್ಪ್ರಯೋಜಕ ಎನಿಸುತ್ತದೆ. ರಕ್ತಕ್ಕೆ ಪರ್ಯಾಯ ಎನಿಸುವಂತದ್ದು ಯಾವುದೂ ಇಲ್ಲ. ಇದನ್ನು ಅರಿತುಕೊಂಡು ಆಟೋ ಚಾಲಕರು ಶಿಬಿರ ಹಮ್ಮಿಕೊಳ್ಳುವ ಮೂಲಕ ಸೌಹಾರ್ದ ತೋರಿಸಿದ್ದಾರೆ ಎಂದರು.
ಎ.ಜೆ.ಆಸ್ಪತ್ರೆಯ ಡಾ| ನಿತಿನ್ ಆಚಾರ್ಯ ಉದ್ಘಾಟಿಸಿದರು. ಯುಎಸ್‌ಡಬ್ಲ್ಯುಒ ಅಧ್ಯಕ್ಷ ರಹೀಂ ಯು.ಬಿ.ಎಂ., ಬ್ಲಿಡ್ ಹೆಲ್ಪ್ಲೈನ್ ಪ್ರಯೋಜಕ ನವಾಝ್ ದೇರಳಕಟ್ಟೆ, ಗೌರವಾಧ್ಯಕ್ಷ ನಝೀರ್ ಹುಸೈನ್, ಸಮಾಜ ಸೇವಕ ಅಬ್ಟಾಸ್ ಉಚ್ಚಿಲ್, ಯಾಹ್ಯಾ ಕೆ.ಬಿ., ಎ.ಜೆ. ಆಸ್ಪತ್ರೆಯ ರಕ್ತ ಪೂರೈಕೆ ವಿಭಾಗದ ವ್ಯವಸ್ಥಾಪಕ ಗೋಪಾಲಕೃಷ್ಣ, ಫಯಾಝ್ ಅಲಿ ಬೈಂದೂರು, ಲತೀಫ್ ಕೈರಳಿ, ರವೂಫ್ ಬಂದರ್, ಕೆ.ಎಸ್. ಮುಹಮ್ಮದ್, ಸಂಚಾಲಕ ಸಂಶುದ್ದೀನ್ ಉಚ್ಚಿಲ್, ಮುಸ್ತಫಾ ಕೆ.ಸಿ.ರೋಡು ಮೊದಲಾದವರು ಉಪಸ್ಥಿತರಿದ್ದರು.
ಕೆ.ಸಿ.ನಗರ ಮಸೀದಿಯ ಖತೀಬ್ ಮೌಲಾನ ಹನೀಫ್ ಸಖಾಫಿ ದುವಾ ನೆರವೇರಿಸಿದರು. ಸಲಾಂ ಉಚ್ಚಿಲ್ ನಿರೂಪಿಸಿದರು.
ಸಮ್ಮಾನ
ಕಾರ್ಯಕ್ರಮದಲ್ಲಿ ಹಿರಿಯ ಅಟೋ ಚಾಲಕರಾದ ಕೆ.ಎಚ್. ಮುಹಮ್ಮದ್, ಅಹ್ಮದ್ ಬಾವಾ, ಮಂಜಪ್ಪ, ಇಸ್ಮಾಯಿಲ್ ಹಾಗೂ ಅತಿಹೆಚ್ಚು ರಕ್ತದಾನ ಮಾಡಿದ ಹೈದರಾಲಿ, ಶರೀಫ್ ಮಾಡೂರು, ಮುಸ್ತಫಾ ಹಿದಾಯತ್ ನಗರ, ಜಾವೇದ್ ಕೆ.ಸಿ.ನಗರ ಸಮ್ಮಾನಿಸಲಾಯಿತು.