Advertisement

4,000 ಮೊಟ್ಟೆಗಳ ಸಮೇತ ಆಟೋ ಚಾಲಕ ಪರಾರಿ…ಮೊಟ್ಟೆ ಕಳ್ಳನಿಗಾಗಿ ಪೊಲೀಸರಿಂದ ಶೋಧ

09:38 PM Dec 12, 2022 | Team Udayavani |

ಗ್ವಾಲಿಯರ್‌: ಮಧ್ಯಪ್ರದೇಶದ ಗ್ವಾಲಿಯರ್‌ನ ಭಾರತೀಯ ವಾಯು ಪಡೆಯ ಕ್ಯಾಂಟೀನ್‌ಗೆ 4,000 ಮೊಟ್ಟೆಗಳನ್ನು ಸಾಗಿಸುತ್ತಿದ್ದ ಆಟೋರಿಕ್ಷಾದ ಚಾಲಕ ಸರಕು ಸಮೇತ ಪರಾರಿಯಾಗಿದ್ದಾನೆ. ಈ ಸಂಬಂಧ ಸರಬರಾಜುದಾರ ಮೊರಾರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

“ಸರಬರಾಜುದಾರ ಭಾರತೀಯ ವಾಯು ಪಡೆಯ ಕ್ಯಾಂಟೀನ್‌ಗೆ ಒಂದು ವಾಹನದಲ್ಲಿ ತರಕಾರಿ ಹಾಗೂ ಮತ್ತೂಂದು ವಾಹನದಲ್ಲಿ ಮೊಟ್ಟೆಗಳನ್ನು ಸಾಗಿಸುತ್ತಿದ್ದರು. ತರಕಾರಿಗಳನ್ನು ಕ್ಯಾಂಟೀನ್‌ಗೆ ಇಳಿಸುತ್ತಿದ್ದ ಸಂದರ್ಭದಲ್ಲಿ, ಮೊಟ್ಟೆಗಳ ಸಮೇತ ಆಟೋ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಕಳ್ಳತನ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆರ್‌ಆರ್‌ಆರ್

Advertisement

Udayavani is now on Telegram. Click here to join our channel and stay updated with the latest news.

Next