ಕಲಬುರಗಿ: ಕೋವಿಡ್ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಲು ಮಹಾನಗರ ಪಾಲಿಕೆ ಐದು ಆಟೋ ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡಿದೆ. ಬುಧವಾರದಿಂದ ಈ ಆಟೋಗಳು ದಿನದ 24 ಗಂಟೆ ಸಂಚರಿಸಲಿವೆ.
ಐದು ಆಟೋ ಆಂಬ್ಯಲೆನ್ಸ್ ಗಳು ಎರಡು ಪಾಳಿಯಲ್ಲಿ ಸೇವೆ ಒದಗಿಸಲಿವೆ. ಸಾರ್ವಜನಿಕ ಅನಕೂಲಕ್ಕಾಗಿ ಆಟೋ ಚಾಲಕರು ಮತ್ತು ಆಟೋಗಳ ಉಸ್ತುವಾರಿಯಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ ಅವರ ಮೊಬೈಲ್ ನಂಬರ್ ಗಳನ್ನು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಒದಗಿಸಿದ್ದಾರೆ.
ಇದನ್ನೂ ಓದಿ :ಪರಂ ಬೀರ್ ಸಿಂಗ್ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್
ಪ್ರತಿದಿನ ಬೆಳಗಿನ 8 ರಿಂದ ರಾತ್ರಿ 10 ಗಂಟೆಯವರೆಗೆ ಮೂರು ಆಟೋ ಆಂಬ್ಯುಲೆನ್ಸ್ ಸೇವೆ ನೀಡಲಿವೆ. ಈ ಸಮಯಲ್ಲಿ ಆಟೋ ಅಗತ್ಯವಾದವರು ಚಾಲಕರಾದ ಶೇಖ್ ರಶೀದ್ (ಮೊ.ಸಂ. 90606 37888), ಶೇಖ್ ಶಬ್ಬಿರ್ (ಮೊ.ಸಂ. 99005 62301) ಹಾಗೂ ರವಿಚಂದ್ರ (ಮೊ.ಸಂ. 9035853125 ) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಪ್ರತಿದಿನ ರಾತ್ರಿ 10 ರಿಂದ ಬೆಳಗಿನ 8 ಗಂಟೆಯವರೆಗೆ ಎರಡು ಆಟೋಗಳು ಸೇವೆ ಒದಗಿಸಲಿವೆ. ಈ ಅವಧಿಯಲ್ಲಿ ಸೇವೆ ಬಯಸುವವರು ಚಾಲಕ ಇಸಾಕ್ (ಮೊ.ಸಂ. 95383 69631) ಹಾಗೂ ಶಕೀಲ್ ಮಿಯಾ (ಮೊ.ಸಂ. 76767 04268) ಅವರನ್ನು ಸಂಪರ್ಕಿಸಬಹುದಾಗಿದೆ. ಇದಲ್ಲದೇ ಸೂಪರವೈಜರ್‌ರಾದ ಪ್ರೇಮ್ ಶಿಲ್ದ್ (ಮೊ.ಸಂ. 94838 55538) ಅವರನ್ನೂ ಸೋಂಕಿತರ ಕುಟುಂಬದವರು ಸಂಪರ್ಕಿಸಬಹುದಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ವೆಬ್‌ಸೈಟ್
www.gulbargacity.mrc.gov.in, ಪಾಲಿಕೆಯ ಇ-ಮೇಲ್ ವಿಳಾಸ
itstaff_ulb_gulbarga@yahoo.com, ಪಾಲಿಕೆಯ ವಾಟ್ಸ್ಆ್ಯಪ್ ಸಂಖ್ಯೆ
82777 77728 ಹಾಗೂ ಪಾಲಿಕೆಯ ದೂರವಾಣಿ ಸಂಖ್ಯೆ
08472-260776ಗೂ ಸಂರ್ಪಕಿಸಲು ಅವರು ಕೋರಿದ್ದಾರೆ.