Advertisement

ಎಸ್ಪಿ- ಜಿಲ್ಲಾಧಿಕಾರಿಗೆ ಅಧಿಕಾರ ನೀಡಿ

05:42 PM May 11, 2020 | Team Udayavani |

ಕೋಲಾರ: ಕೋವಿಡ್ ವೈರಸ್‌ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಜಿಲ್ಲೆಯ ಬಗ್ಗೆ ತೆಗೆದುಕೊಳ್ಳುವ ನಿರ್ಣಯಗಳ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ವಹಿಸಬೇಕೆಂದು ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ನಾಗೇಶ್‌ರನ್ನು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್ ವೈರಸ್‌ ತಡೆಗಾಗಿ ಕಳೆದ 50 ದಿನಗಳಿಂದ ಲಾಕ್‌ಡೌನ್‌ ಮಾಡಿದ್ದು, ತೊಂದರೆಯಾಗುತ್ತಿದ್ದರೂ ಜನರು ಸಹಿಸಿಕೊಂಡು ಬಂದಿದ್ದಾರೆ. ಜಿಲ್ಲೆಯು ಹಸಿರು ವಲಯದಲ್ಲಿ ಉಳಿದುಕೊಂಡಿರುವುದಕ್ಕೆ ಇಲ್ಲಿನ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯು ಸಕಾಲಕ್ಕೆ ತೆಗೆದುಕೊಂಡ ನಿರ್ಣಯಗಳು ಎಂದರೆ ತಪ್ಪಾಗಲಾರದು. ಆದರೆ, ಸರಕಾರವು ಲಾಕ್‌ಡೌನ್‌ ಸಡಿಲಿಕೆ ಮಾಡಿದಾಗಿಂ ದಲೂ ಕೆಂಪು, ಕೇಸರಿ ವಲಯ ಗಳಲ್ಲಿರುವ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಜೊತೆಗೆ ಹಸಿರು ಜಿಲ್ಲೆಗಳನ್ನು ಆತಂಕಕ್ಕೀಡು ಮಾಡಿದೆ ಎಂದು ತಿಳಿಸಿದರು.

ಇದರ ನಡುವೆ ಮದ್ಯ ಮಾರಾಟ ಅವಕಾಶ ಮಾಡಿಕೊಟ್ಟಿರುವುದು ಸೇರಿದಂತೆ ಹಲವು ಸರಕಾರವು ತೆಗೆದುಕೊಂಡಿರುವ ಹಲವು ನಿರ್ಣಯಗಳು ಹಸಿರು ಜಿಲ್ಲೆಗಳ ಮೇಲೆಯೂ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಗಳೂ ಹೆಚ್ಚಾಗಿವೆ . ಈಗಾಗಲೇ ಮಾಲೂರು ತಾಲೂ ಕಿನ ಗಡಿಗೆ ಕೋವಿಡ್ ಸೋಂಕಿನ ವ್ಯಕ್ತಿ ಬಂದಿರುವುದು, ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಆಂಧ್ರ ಮೂಲದ ಸೋಂಕಿತ ವರ್ತಕನೋರ್ವ ಬಂದಿರುವ ಉದಾಹರಣೆಗಳೂ ಕಣ್ಣುಮುಂದೆ ಇವೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next