Advertisement
ಇದೇ ವೇಳೆ ಮಧ್ಯಂತರ ಸಮಿತಿಗೆ ಪರ್ಯಾಯವಾಗಿ ಬೇರೆ ಯಾರೂ ಆಯ್ಕೆ ಟ್ರಯಲ್ಸ್ ನಡೆಸುವಂತಿಲ್ಲ. ಮಧ್ಯಂತರ ಸಮಿತಿಯ ಟ್ರಯಲ್ಸ್‌ನಲ್ಲಿ ಎಲ್ಲ ಅರ್ಹ ಕುಸ್ತಿಪಟುಗಳಿಗೂ ಅವಕಾಶ ನೀಡಬೇಕೆಂದು ನ್ಯಾಯಾಲಯ ಹೇಳಿದೆ.
ಫೆ. 26ರಂದು ಡಬ್ಲ್ಯುಎಫ್ಐ ಹೊರಡಿಸಿದ್ದ ಒಂದು ಸುತ್ತೋಲೆಯಲ್ಲಿ ತಾನೇ ಆಯ್ಕೆ ಟ್ರಯಲ್ಸ್ ನಡೆಸುವುದಾಗಿ ಹೇಳಿತ್ತು. ಇದನ್ನು ವಿರೋಧಿಸಿ, ಬಜರಂಗ್ ಪುನಿಯ, ವಿನೇಶ್ ಫೊಗಾಟ್, ಸಾಕ್ಷಿ ಮಲಿಕ್ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೇಂದ್ರ ಕ್ರೀಡಾ ಸಚಿವಾಲಯದಿಂದ ಅಮಾನತುಗೊಂಡಿರುವ ಡಬ್ಲ್ಯುಎಫ್ಐಗೆ ಆಯ್ಕೆ ಟ್ರಯಲ್ಸ್ ನಡೆಸುವ ಅಧಿಕಾರವಿಲ್ಲ, ಅದು ರಾಷ್ಟ್ರೀಯ ಕ್ರೀಡಾ ನೀತಿಯನ್ನು ಉಲ್ಲಂ ಸಿದೆ ಎಂದು ಅರ್ಜಿ ಹಾಕಿದ್ದರು. ಇದನ್ನು ದಿಲ್ಲಿ ಉಚ್ಚ ನ್ಯಾಯಾಲಯ ಪುರಸ್ಕರಿಸಿದೆ.