ಹೊಸದಿಲ್ಲಿ: ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಗೆ ಸಂಬಂಧಿಸಿದ ವಾಜ್ಯಗಳ ಪರಿಹಾರಕ್ಕೆ ಮೇಲ್ಮ ನವಿ ಪ್ರಾಧಿಕಾರ ಸ್ಥಾಪನೆ ಬಗ್ಗೆ 2022- 23ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆಗಳು ಇವೆ. ಅದಕ್ಕೆ ಜಿಎಸ್‌ಟಿಎಟಿ ಮೇಲ್ಮನವಿ ಪ್ರಾಧಿಕಾರ ಎಂದು ಹೆಸರಿಸುವ ಸಾಧ್ಯತೆಗಳು ಇವೆ.
ಸದ್ಯ ತೆರಿಗೆ ಸಂಬಧಿಸಿದ ವಿಚಾರಗಳಿಗೆ ತೆರಿಗೆದಾ ರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ. ಇದ ರಿಂದಾಗಿ ಹೆಚ್ಚಿನ ಸಮಯ ಕಾನೂನು ಹೋರಾಟಕ್ಕೆ ವಿನಿಯೋಗವಾಗುತ್ತದೆ.
ಮೇಲ್ಮನವಿ ಪ್ರಾಧಿಕಾರದ ಸ್ಥಾಪನೆಯಿಂದ ಅನು ಕೂಲವೇ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ:ಕೇಂದ್ರದ ಯೋಜನೆಗಳು ಗಾಂಧಿ ಚಿಂತನೆಯ ಹೊಸ ಸ್ವರೂಪ
ಜತೆಗೆ ಕಡಿಮೆ ಪ್ರಮಾಣದಲ್ಲಿ ಕಾನೂನು ತಕರಾರು ಪ್ರಕರಣಗಳು ಇರುವಂತೆ ಮಾಡಿ, ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸುವುದು ಸರ್ಕಾ ರದ ಇರಾದೆ. ಜಿಎಸ್‌ಟಿ ಕಾಯ್ದೆಯ ಅನುಸಾರ 2019ರ ಜ.23ರಂದು ನಡೆ ದಿದ್ದ ಕೇಂದ್ರ ಸಂಪುಟ ಸಭೆಯಲ್ಲಿ ಪ್ರಾದೇಶಿಕ ಕಚೇರಿಗಳನ್ನು ಒಳಗೊಂಡ ಜಿಎಸ್‌ಟಿ ಮೇಲ್ಮನವಿ ಪ್ರಾಧಿಕಾರ ರಚನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರ ಪ್ರಧಾನ ಕಚೇರಿ ದೆಹಲಿಯಲ್ಲಿ ಇರಬೇಕು ಎಂದು ನಿರ್ಧರಿಸಲಾಗಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.