Advertisement
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಅಕ್ರಮ ಗಣಿಗಾರಿಕೆ ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಕೆಲವು ರಾಜಕಾರಣಿಗಳೊಂದಿಗೆ ಶಾಮೀಲಾಗಿ ರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.
Related Articles
Advertisement
ಅಕ್ರಮ ಜಲ್ಲಿ ಕ್ರಷರ್‌ಗಳಿಗೆ ಹಾಕಿರುವ ದಂಡ ಮತ್ತು ತೆರಿಗೆ ಪಾವತಿ ಮಾಡದವರು ಮಾ.31 ರೊಳಗೆ ಪಾವತಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಅಧಿಕಾರಿಗಳು ಇದುವರೆಗೂ ಕ್ರಮ ಜರುಗಿಸಿಲ್ಲ ಎಂದು ಕಿಡಿಕಾರಿದರು.
ಗಣಿ ಅಧಿಕಾರಿ ಷಣ್ಮುಗಂ ತರಾಟೆ: ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಷಣ್ಮುಗಂ ಅವರನ್ನು ತರಾಟೆಗೆ ತೆಗೆದುಕೊಂಡ ಸಂಸದ ಮುನಿಸ್ವಾಮಿ, ಮಾಲೂ ರಿನಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಮೌನವಾ ಗಿರುವುದು ಏಕೆ ಎಂದು ಪ್ರಶ್ನಿಸಿದರು.
3-4 ದಿನಗಳಲ್ಲಿ ಕ್ರಮ: ಅಕ್ರಮ ಗಣಿ ಈಗಾಗಲೇ ಕಾರ್ಯೋನ್ಮುಖವಾಗಿದ್ದು 3-4 ದಿನದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.
ಈಗಾಗಲೇ ದಂಡ ಪಾವತಿ ಮಾಡದವರ ಕ್ರಷರ್‌ಗಳಿಗೆ ವಿದ್ಯುತ್ ಕಡಿತಗೊಳಿಸಲಾಗಿದೆ. 2015 ರಿಂದ ಗಣಿಗಾರಿಕೆ ನಡೆಸುತ್ತಿದ್ದವರು ರಾಯಲ್ಟಿ ಕಟ್ಟುವಂತೆ ಸೂಚನೆ ನೀಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಷಣ್ಮುಗಂ ತಿಳಿಸಿದರು.
ಇಬ್ಬರ ನಡುವೆ ಮಾತಿನ ಚಕಮಕಿ:ಸಂಸದರು ಕೇಳಿದ ಕೆಲವು ಪ್ರಶ್ನೆಗಳಿಗೆ ನೇರ ಉತ್ತರ ಕೊಡಲು ಹಿಂಜರಿದ ಅಧಿಕಾರಿ ವಿರುದ್ಧ ಇದರಲ್ಲಿ ಕರ್ತವ್ಯವನ್ನು ಜವಾಬ್ದಾರಿ ಯುತವಾಗಿ ನಿರ್ವಹಿಸುತ್ತಿಲ್ಲ ಎಂದು ಗುಡುಗಿದರು.ಈ ವೇಳೆ ಸಂಸದ ಎಸ್.ಮುನಿಸ್ವಾಮಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ನಡುವೆಯೂ ಮಾತಿನ ಚಕಮಕಿ ನಡೆಯಿತು.
ಇದಕ್ಕೂ ಮುಂಚೆ ನಡೆದ ಮಾಲೂರು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಬಗ್ಗೆ ವಿವರ ನೀಡಿದ ಸಂಸದರು, ಮಾಲೂರು ಶಾಸಕ ಕೆ.ನಂಜೇಗೌಡರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಾರೆ. ಸರ್ಕಾರಿ ಕಾರ್ಯ ಕ್ರಮಗಳನ್ನು ನಡೆಸುವಾಗ ಜಿಪಂ, ತಾಪಂ, ಗ್ರಾಪಂ, ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯ ಮಾಡದೆ ಎಚ್ಚರ ವಹಿಸಬೇಕೆಂದು ಸೂಚನೆ ನೀಡಿರುವುದಾಗಿಯೂ ತಿಳಿಸಿದರು.
ಅಭಿವೃದ್ಧಿ ಕಾರ್ಯಗಳಲ್ಲಿ ಪಕ್ಷಪಾತ ಮಾಡಬಾರದು ಜನಪ್ರತಿನಿಧಿಗಳು ಸಾರ್ವ ಜನಿಕರ ಸೇವಕರು ಎನ್ನುವುದನ್ನು ಮರೆಯುವಂತಿಲ್ಲ ಇದನ್ನು ನಂಜೇಗೌಡರು ಮರೆಯಬಾರದು ಎಂದರು.
ವಿವರ ನೀಡಿದ ಸಂಸದರು ಬಯಲು ಸೀಮೆ ಜಿಲ್ಲೆಯಾದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರನ್ನು ಹರಿಸ ಬೇಕಾಗಿದೆ. ಕೃಷ್ಣ ನದಿ ನೀರಿನಲ್ಲಿ ನಮ್ಮ ಪಾಲೂ ಇದೆ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಕೀಳು ಆರೋಪ: ರಾಜ್ಯದಲ್ಲಿನ ನೆರೆ ಹಾವಳಿಗೆ ಕೇಂದ್ರ ಸರ್ಕಾರದ ನೀರಸ ಸ್ಪಂದನೆಗೆ ಕಾಂಗ್ರೆಸ್ ಆರೋಪದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ, ಕಾಂಗ್ರೆಸ್ ನಾಯಕರ ಆರೋಪ ಸರಿಯಲ್ಲ. ಅವರದ್ದು ಮೊಸರಿನಲ್ಲಿ ಕಲ್ಲು ಹುಡುಕುವ ಸ್ವಭಾವ ಎಂದು ಟೀಕಿಸಿದರು.
ಬಿಜೆಪಿ ಜಿಪಂ ಸದಸ್ಯ ಮಹೇಶ್, ಜಿಪಂ ಉಪಾಧ್ಯಕ್ಷೆ ಯಶೋಧಮ್ಮ, ಜಿಪಂ ಸದಸ್ಯ ಶ್ರೀನಿವಾಸ, ಶ್ರೀಕೃಷ್ಣ ಮತ್ತಿತರರಿದ್ದರು.
ಕೋಲಾರದ ಪ್ರವಾಸಿ ಮಂದಿರದಲ್ಲಿ ಸಂಸದ ಎಸ್.ಮುನಿಸ್ವಾಮಿ ಸುದ್ದಿಗೋಷ್ಠಿ ನಡೆಸಿದರಲ್ಲದೇ ಮಾಲೂರು ತಾಲೂಕು ಅಧಿಕಾರಿಗಳೊಂದಿಗೆ ಮಾತನಾಡಿದರು.