Advertisement
ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಏರ್ಪ ಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಿತರಕ್ಷಣಾ ಹಾಗೂ ಕುಂದುಕೊರತೆ ಸಮಿತಿ ಸಭೆ ಆರಂಭ ವಾಗುತ್ತಲೇ ದಲಿತ ಮುಖಂಡರು, 2015-16 ರಲ್ಲಿ 7 ತಾಲೂಕುಗಳಲ್ಲಿ ದಲಿತರಿಗೆ ಸ್ಮಶಾನ ನಿರ್ಮಿಸಲು ತೀರ್ಮಾನಿಸಲಾಗಿದೆ. ಈವರೆಗೂ ಆಗಿಲ್ಲ ಎಂದು ದೂರಿದರು.
Related Articles
Advertisement
ಕೂಡಲೇ ಅಂಗಡಿ ಮಳಿಗೆ ಹರಾಜು ಪ್ರಾರಂಭಿಸಿ, ದಲಿತ ಸಮುದಾಯಕ್ಕೆಂದು ಮೀಸಲಿರುವ ಅಂಗಡಿ ನೀಡುವಂತೆ ಡೀಸಿ ಅಧಿಕಾರಿಗಳಿಗೆ ಸೂಚಿಸಿದರು. ಸ್ಮಶಾನ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಗುಬ್ಬಿ ತಾಲೂಕಿನ ಸಿ.ಎಸ್ ಪುರ, ಕಲ್ಲೂರು ಹಾಗೂ ನಂದಿಹಳ್ಳಿಯಲ್ಲಿ ಸ್ಮಶಾನ ಭೂಮಿ ಅಭಿವೃದ್ಧಿ ಪೂರ್ಣಗೊಂಡಿಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿ ಪ್ರಶ್ನೆಗೆ ಉತ್ತರಿಸಿದ ಗುಬ್ಬಿ ತಹಶೀಲ್ದಾರ್, ಕಾಮಗಾರಿ ಆರಂಭವಾಗಿದ್ದು, ನಂದಿಹಳ್ಳಿ ಗ್ರಾಮದ ಸ್ಮಶಾನ ಭೂಮಿ ಪಕ್ಕದ ಜಮೀನಿನವರು ಉಳುಮೆ ಮಾಡಿ ತೆಂಗಿನ ಸಸಿ ನೆಟ್ಟಿದ್ದಾರೆ. ಈ ಬಗ್ಗೆ ಜಮೀನಿ ನವರಿಗೆ ತಿಳಿಸಿದ್ದು, ತೆರವುಗೊಳಿಸಿದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಜಿಪಂ ಸಿಇಒ ಶುಭಾ ಕಲ್ಯಾಣ್, ಎಸ್‌ಪಿ ಡಾ.ಕೋ. ನಂ.ವಂಶಿಕೃಷ್ಣ, ಉಪವಿಭಾಗಾಧಿಕಾರಿಗಳಾದ ಶಿವ ಕುಮಾರ್, ಕೆ.ಆರ್.ನಂದಿನಿ, ಸಮಾಜ ಕಲ್ಯಾಣಇಲಾಖೆ ಜಂಟಿ ನಿರ್ದೇಶಕ ಪ್ರೇಮ್‌ನಾಥ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ದಲಿತ ಮುಖಂಡ ರಾದ ಪಿ.ಎನ್.ರಾಮಯ್ಯ ಇತರರಿದ್ದರು.
ಗೊಂದಲದ ಗೂಡು: ದಲಿತರ ಕುಂದುಕೊರತೆ ಸಭೆ ಪ್ರಾರಂಭದಿಂದ ಮುಗಿಯುವವರೆಗೂ ಗೊಂದಲದ ಗೂಡಾಗಿತ್ತು. ಸರಿಯಾಗಿ ಮೈಕ್ ಕೇಳುತ್ತಿರಲಿಲ್ಲ, ಯಾರು ಏನು ಮಾತನಾಡುತ್ತಾರೆ, ಅಧಿಕಾರಿಗಳು ಏನು ಉತ್ತರ ನೀಡುತ್ತಾರೆ ಎಂಬುದೇ ಅರ್ಥವಾಗುತ್ತಿರಲಿಲ್ಲ. ಕೆಲವರಿಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ, ಒಟ್ಟಾರೆ ಸಭೆ ನಡೆಯಿತು ಎನ್ನುವಂತೆ ದಲಿತರ ಸಭೆ ನಡೆಸಲಾಯಿತು.
ವಸತಿಗೆ ಭೂಮಿ ಗುರುತಿಸಿಲ್ಲ: ಮಧುಗಿರಿ ಪುರಸಭೆಯಲ್ಲಿ 53 ಪೌರ ಕಾರ್ಮಿಕರಿದ್ದಾರೆ. ಪಾವಗಡದಲ್ಲಿ 43 ಮಂದಿ ಕೆಲಸ ಮಾಡುತಿದ್ದು, ಸರಿಯಾಗಿ ವೇತನ ನೀಡುತ್ತಿಲ್ಲ, ವಸತಿಗೆ ಭೂಮಿ ಗುರುತಿಸಿಲ್ಲ ಎಂದು ಕೊಳೆಗೇರಿ ಸಮಿತಿಯ ಎ.ನರಸಿಂಹಮೂರ್ತಿ ದೂರಿದರು. ಇದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿ, ಎಲ್ಲ ತಾಲೂಕು ಗಳಲ್ಲಿಯೂ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ತಹಶೀಲ್ದಾರ್‌ಗಳಿಗೆ ಸೂಚಿಸಿದರು.
ದಲಿತರಿಗೆ ಪ್ರವೇಶವಿಲ್ಲ: ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ ಗ್ರಾಮದಲ್ಲಿ ಕ್ಷೌರದ ಅಂಗಡಿಗಳಿಗೆ ದಲಿತರಿಗೆ ಪ್ರವೇಶವಿಲ್ಲ ಎಂದು ದಲಿತರೊಬ್ಬರು ಸಭೆಗೆ ದೂರು ನೀಡಿದರು. ದೇವಾಲಯ, ಹೋಟೆಲ್, ಅಂಗಡಿ, ಕ್ಷೌರದ ಅಂಗಡಿಗಳಿಗೆ ದಲಿತರಿಗೆ ಪ್ರವೇಶ ನೀಡದಿರುವವರಿಗೆ ಮೊದಲು ಅರಿವು ಮೂಡಿಸಬೇಕು. ಸ್ಪಂದಿಸದಿದ್ದರೆ ದೂರು ದಾಖಲಿಸಿ ಎಂದು ಅಧಿಕಾರಿಗಳಿಗೆ ಡೀಸಿ ಸೂಚಿಸಿದರು.