Advertisement

ಅಧಿಕಾರಿಗಳ ವಿರುದ್ಧ ಸದಸ್ಯರ ಗರಂ

04:18 PM Feb 28, 2017 | Team Udayavani |

ಚಿತ್ತಾಪುರ: ತಾಲೂಕಿನಲ್ಲಿರುವ ವಸತಿ ನಿಲಯಗಳಲ್ಲಿ ಬಯೋಮೆಟ್ರಿಕ್‌ಗಳಿಲ್ಲ. ಆದರೆ ವರದಿಯಲ್ಲಿ ಇದೇ ಎಂದು ಸುಳ್ಳು ಹೇಳುತ್ತಿದ್ದೀರಿ ಎಂದು ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್‌ಪಾಟೀಲ ಸಮಾಜ ಕಲ್ಯಾಣ ಇಲಾಖೆ ಅಧಿಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ತಾಪಂ ಸಭಾಗಂಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

Advertisement

ನಾನು ಭೀಮನಳ್ಳಿ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿ ಬಯೋಮೆಟ್ರಿಕ್‌ ಇರಲಿಲ್ಲ. ಯಾಕೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುತ್ತೀದ್ದಿರಿ ಎಂದು ಹರಿಹಾಯ್ದರು. ಸಿಡಿಪಿಒ ಶಿವಶರಣಪ್ಪ ವರದಿ ಓದುವಾಗ ಸದಸ್ಯರಾದ ಮುನಿಯಪ್ಪ ಕೊಳ್ಳಿ, ಭಾಗಪ್ಪ ಕೊಲ್ಲೂರ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಬಹಳ ವರ್ಷಗಳಿಂದ ಸುಣ್ಣ ಬಣ್ಣ ಇಲ್ಲ. ಆದ್ದರಿಂದ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಸುಣ್ಣ ಬಣ್ಣ ಹಚ್ಚುವ ಕೆಲಸ ಮಾಡಿ ಎಂದು ಸೂಚಿಸಿದರು. 

ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್‌ ಪಾಟೀಲ ಮಾತನಾಡಿ, ಮೇಲ್ವಿಚಾರಕರು ಅಂಗನವಾಡಿ ಕಾರ್ಯಕರ್ತೆಯರಿಂದ ಹಣ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅವರನ್ನು ವರ್ಗಾವಣೆ ಮಾಡುವಂತೆ ಕಳೆದ ಸಭೆಯಲ್ಲಿಯೇ ಸೂಚಿಸಿದ್ದೆ, ಆದರೆ ಇಲ್ಲಿಯವರೆಗೆ ವರ್ಗಾವಣೆ ಯಾಕೇ ಮಾಡಿಲ್ಲ ಎಂದು ಅಧಿಧಿಕಾರಿ ವಿರುದ್ಧ ಕಿಡಿ ಕಾರಿದರು. ಸಿಡಿಪಿಒ ಮಾತನಾಡಿ, ಕೆಲಸದ ಒತ್ತಡದಿಂದ ವರ್ಗಾವಣೆ ಮಾಡಲು ಆಗಲಿಲ್ಲ.

ಆದ್ದರಿಂದ ಏಪ್ರಿಲ್‌ನಲ್ಲಿ ವರ್ಗಾವಣೆ ಮಾಡಲಾಗುವುದು ಎಂದು ಉತ್ತರಿಸಿದರು. ಸದಸ್ಯ ಭಾಗಪ್ಪ ಕೊಲ್ಲೂರ ಮಾತನಾಡಿ, ಶಹಾಬಾದ ಕಚೇರಿಯಲ್ಲಿರುವ ಮೇಲ್ವಿಚಾರಿಕಿಯರನ್ನು ಚಿತ್ತಾಪುರಕ್ಕೆ ವರ್ಗಾವಣೆ ಮಾಡಿದರೂ ಇಲ್ಲಿಯವರೆಗೆ ಕೆಲಸಕ್ಕೆ ಹಾಜರಿ ಆಗಿಲ್ಲ. ಇದರಿಂದ ಸಿಡಿಪಿಒ ಅವರ ಆದೇಶ ಉಲ್ಲಂಘನೆ ಮಾಡಿದ್ದಾರೆ. ಇವರ ಮೇಲೆ ಯಾವ ಕ್ರಮ ಕೈಗೊಂಡಿದ್ದಿರಿ ಎಂದು ಶಹಾಬಾದ ಸಿಡಿಪಿಒ ಮಲ್ಲಣ್ಣ ದೇಸಾಯಿ ಅವರನ್ನು ಪ್ರಶ್ನಿಸಿದರು. 

ಸಿಡಿಪಿಒ ಮಲ್ಲಣ್ಣ ದೇಸಾಯಿ ಮಾತನಾಡಿ, ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ವರ್ಗಾವಣೆ ಮಾಡಲಾಗಿತ್ತು. ಆದರೆ ಪ್ರಭಾವಿ ರಾಜಕಾರಣಿಗಳು ಒತ್ತಡ ಹಾಕಿದ್ದರಿಂದ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಮಾಚ್‌ ìನಲ್ಲಿ ವರ್ಗಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಾಲವಾರ ಸ್ಟೇಷನ್‌ ಅಂಗನವಾಡಿ ಕೇಂದ್ರದ 2ರ ಕಾರ್ಯಕರ್ತೆ ಅಂಗನವಾಡಿ ಕಟ್ಟಡ ರಿಪೇರಿ ಮಾಡಲು ಹೋದ ಗುತ್ತಿಗೆದಾರರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. 

Advertisement

ಅದರಲ್ಲೂ ತಾಪಂ ಸದಸ್ಯರಿಗೂ ಯಾವುದೇ ರೀತಿಯ ಕಿಮ್ಮತ್ತು ನೀಡಿಲ್ಲ. ನೀವು ಏನು ಮಾಡ್ಕೊತ್ತೀರಿ ಮಾಡ್ಕೊàಳ್ಳಿ. ಆದರೆ ನಾನು ಹೆದರುವವಳಲ್ಲ ಎಂದ್ದಿದ್ದಾರೆ. ಆದ್ದರಿಂದ ಅವರನ್ನು ಅಮಾನತು ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಬೇಕು ಎಂದು ನಾಲವಾರ ತಾಪಂ ಸದಸ್ಯ ಅಬ್ದುಲ್‌ ರಸೂಲ್‌ ಒತ್ತಾಯಿಸಿದರು. ಒಂದು ವೇಳೆ ಅಮಾನತು ಮಾಡದೇ ಇದ್ದರೆ ತಾಪಂ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಸಭೆಗೆ ಮಾಹಿತಿ ತರದ ಕಾರಣ ಶಹಾಬಾದ, ಕಾಳಗಿ, ಚಿತ್ತಾಪುರ ಜೆಸ್ಕಾಂ ಅಧಿಧಿಕಾರಿಗಳನ್ನು ಸಭೆಯಿಂದ ಹೊರಗಡೆ ಕಳುಹಿಸಲಾಯಿತು. ಕೇತ್ರ ಶಿಕ್ಷಣಾಧಿಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಾಲೇಂದ್ರ ಗುಂಡಪ್ಪ, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಬಸಲಿಂಗಪ್ಪ ಡಿಗ್ಗಿ , ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಅಧಿಧಿಕಾರಿಗಳು ಪ್ರಗತಿ ವರದಿ ಓದಿದರು. 

ತಾಪಂ ಉಪಾಧ್ಯಕ್ಷ ಹರಿನಾಥ ಚವ್ಹಾಣ, ಸದಸ್ಯರಾದ ನಾಮದೇವ ರಾಠೊಡ, ಬಸವರಾಜ ಹೊಸ್ಸಳ್ಳಿ, ರೇವಣಸಿದ್ದಪ್ಪ ಮಡಿ, ವಿಜಯಕುಮಾರ ನಿಂಗದೆ, ಸುಧಿರ ವಿಜಾಪುರ, ಮಲ್ಲಣ್ಣ ಸಣಮೋ, ರವಿ ಪಡ್ಲ, ರಾಮು ರಾಠೊಡ, ಬಸವರಾಜ ಲೋಕನಳ್ಳಿ, ರತ್ನಮ್ಮ ಗುತ್ತೇದಾರ, ವಂದನಾ ಹಣಮಂತ, ನೀಲಾಬಾಯಿ ಭೀಮರಾಯ, ವಿಜಯ ಚವ್ಹಾಣ, 

ನಿರ್ಮಲಾ ಪಾಟೀಲ, ಮೇರಜ್‌ಬೇಗಂ, ಸಂಗೀತಾ ದೇವಿಂದ್ರ, ಮಹಾದೇವಿ ಅವಂಟಿ, ಪುಷ್ಪಾ ಚವ್ಹಾಣ, ಅಕ್ಕನಾಗಮ್ಮ ಶೀಲವಂತ, ಕಲಾವತಿ ಸಂಗನ್‌, ಶ್ರೀದೇವಿ ಪ್ರಕಾಶ, ಬಸವರಾಜ ರೇವಣಸಿದ್ದಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಲಕ್ಷಣ ಶೃಂಗೇರಿ, ಎಡಿ ಅಬ್ದುಲ್‌ ನಬಿ, ಟಿಪಿಒ  ಇಸೋಫ್‌ ಅಲಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next