ನ್ಯೂಯಾರ್ಕ್: ಭಾರತ ಮೂಲದ ಅಮೆರಿಕ ನಿವಾಸಿ ಲೇಖಕರಾಗಿರುವ ಸಲ್ಮಾನ್ ರಶ್ದಿ ಅವರನ್ನು ವೇದಿಕೆಯ ಮೇಲೇ ಚಾಕು ಚುಚ್ಚಿ ಕೊಲೆ ಮಾಡುವ ಪ್ರಯತ್ನ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ನಡೆದಿದೆ.
ರಶ್ದಿ ಅವರು ನ್ಯೂಯಾರ್ಕ್‌ನ ಚೌಟಕ್ವಾ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಉಪನ್ಯಾಸ ಕೊಡುವವರಿದ್ದರು. ನಿರೂಪಕರು ರಶ್ದಿ ಅವರ ಪರಿಚಯ ಮಾಡಿಕೊಡುತ್ತಿದ್ದ ಸಮಯದಲ್ಲಿ ವೇದಿಕೆ ಹತ್ತಿದ ವ್ಯಕ್ತಿ, ರಶ್ದಿ ಅವರಿಗೆ ಚಾಕುವಿನಿಂದ ಚುಚ್ಚಿದ್ದಾನೆ. ತಕ್ಷಣ ರಶ್ದಿ ಅವರು ಕೆಳಕ್ಕೆ ಬಿದ್ದಿದ್ದಾರೆ. ಚಾಕು ಚುಚ್ಚಿರುವ ದುಷ್ಕರ್ಮಿಯನ್ನು ವಶಕ್ಕೆ ಪಡೆಯಲಾಗಿದೆ.
ರಶ್ದಿ ಅವರು 1988ರಲ್ಲಿ ಬರೆದ “ದಿ ಸೆಟೆನಿಕ್ ವರ್ಸಸ್’ ಪುಸ್ತಕ ಇರಾನ್‌ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮುಸ್ಲಿಂ ಸಮುದಾಯದವರು ಈ ಪುಸ್ತಕವನ್ನು ಧರ್ಮ ನಿಂದನೆಯ ಪುಸ್ತಕ ಎಂದು ಕರೆದಿದ್ದು, ಅದೇ ಹಿನ್ನೆಲೆ ಇರಾನ್‌ನಲ್ಲಿ ಪುಸ್ತಕವನ್ನು ಬ್ಯಾನ್ ಮಾಡಲಾಗಿದೆ.
ಹಾಗೆಯೇ ರಶ್ದಿ ಅವರನ್ನು ಹತ್ಯೆ ಮಾಡುವವರಿಗೆ 3.3 ಮಿಲಿಯನ್ ಡಾಲರ್ ಬಹುಮಾನವನ್ನೂ ಘೋಷಿಸಲಾಗಿದೆ.