Advertisement

ಆನ್‌ಲೈನ್‌ನಲ್ಲೇ ದೃಢೀಕರಣ

06:00 AM Oct 28, 2018 | Team Udayavani |

ನವದೆಹಲಿ: ಇನ್ನು ಮುಂದೆ ಪಾಸ್‌ ಪೋರ್ಟ್‌ಗೆ ಅರ್ಜಿ ಸಲ್ಲಿಸಿದವರು ಪೊಲೀಸ್‌ ದೃಢೀಕರಣಕ್ಕಾಗಿ ದಿನಗಟ್ಟಲೆ ಕಾಯುವ, ಅಲೆಯುವ ಸಮಸ್ಯೆ ಇರುವುದಿಲ್ಲ. ಏಕೆಂದರೆ, ಸದ್ಯದಲ್ಲೇ ಆನ್‌ಲೈನ್‌ನಲ್ಲೇ ಪೊಲೀಸ್‌ ವೆರಿಫಿಕೇಷನ್‌ ಸೌಲಭ್ಯ ಜಾರಿಯಾಗಲಿದೆ. ಇದಿಷ್ಟೇ ಅಲ್ಲ, ಚಾಲಕನನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ, ಬಾಡಿಗೆದಾರನಿಗೆ ಮನೆ ನೀಡುವಾಗ, ಕೆಲಸದಾಳುಗಳನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆ ಅಥವಾ ಪೊಲೀಸ್‌ ದೃಢೀಕರಣ ಮಾಡಬೇಕಿದ್ದರೆ, ಆ ಕೆಲಸವೂ ಆನ್‌ಲೈನ್‌ನಲ್ಲೇ ನಡೆಯಲಿದೆ. ಅಪರಾಧಗಳು ಮತ್ತು ಅಪರಾಧಿಗಳ ದತ್ತಾಂಶಗಳನ್ನು ಸಂಗ್ರಹಿಸಿಟ್ಟಿರುವಂಥ ಸಿಸಿಟಿಎನ್‌ಎಸ್‌(ಕ್ರೈಂ ಆ್ಯಂಡ್‌ ಕ್ರಿಮಿನಲ್‌ ಟ್ರ್ಯಾಕಿಂಗ್‌ ನೆಟ್‌ವರ್ಕ್‌ ಆ್ಯಂಡ್‌ ಸಿಸ್ಟಮ್ಸ್‌) ಇಂಥ ಆನ್‌ಲೈನ್‌ ಸೇವೆಗಳನ್ನು ಒದಗಿಸಲು ಮುಂದಾಗಿದೆ.

Advertisement

ಇದರ ಜೊತೆಗೆ, ಕಾರು ಕಳವು ದೂರುಗಳ ನೋಂದಣಿ, ಎಫ್ಐಆರ್‌ ಪ್ರತಿ ಪಡೆಯುವುದು, ಎಫ್ಐಆರ್‌ ಸ್ಥಿತಿಗತಿ ಅರಿಯುವುದು ಮತ್ತಿತರ ಸೇವೆಗಳನ್ನೂ ಸಿಸಿಟಿಎನ್‌ಎಸ್‌ ಆನ್‌ಲೈನ್‌ ಮೂಲಕ ಒದಗಿಸಲಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ಉಪನಿರ್ದೇಶಕ ಪ್ರಶೂನ್‌ ಗುಪ್ತಾ ತಿಳಿಸಿದ್ದಾರೆ.

ಸಿಸಿಟಿಎನ್‌ ಬಗ್ಗೆ: 26/11ರ ಮುಂಬೈ ದಾಳಿ ಬಳಿಕ ಅಂದಿನ ಗೃಹ ಸಚಿವ ಪಿ.ಚಿದಂಬರಂ ಅವರು 2009ರಲ್ಲಿ ಸಿಸಿಟಿಎನ್‌ ಅನ್ನು ಸ್ಥಾಪಿಸಿದರು.  ಇದರಲ್ಲಿ ದೇಶಾದ್ಯಂತದ ಅಪರಾಧ, ಅಪರಾಧಿಗಳ ದತ್ತಾಂಶಗಳಿದ್ದು, ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಎಫ್ಐಆರ್‌ಗಳು, ತನಿಖೆ, ಆರೋಪಪಟ್ಟಿಗೆ ಸಂಬಂಧಿಸಿದ ಮಾಹಿತಿಗಳೂ ಇದರಲ್ಲಿವೆ. ಸಿಬಿಐ, ಗುಪ್ತಚರ ಇಲಾಖೆ, ಎನ್‌ಐಎ, ಜಾರಿ ನಿರ್ದೇಶನಾಲಯ ಮತ್ತು ಮಾದಕದ್ರವ್ಯ ನಿಯಂತ್ರಣ ಬ್ಯೂರೋಗಳು ಕೂಡ ಈ ದತ್ತಾಂಶಗಳನ್ನು ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next