Advertisement

AUSvsWI; ಆಸೀಸ್ ವಿರುದ್ಧದ ಸರಣಿಗೆ ವೆಸ್ಟ್ ಇಂಡೀಸ್ ಏಕದಿನ- ಟಿ20 ತಂಡ ಪ್ರಕಟ

11:26 AM Jan 12, 2024 | Team Udayavani |

ಟ್ರಿನಿಡಾಡ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಾಗಿ ವೆಸ್ಟ್ ಇಂಡೀಸ್ ತಂಡ ಪ್ರಕಟಿಸಲಾಗಿದೆ. ಕಳಪೆ ಫಾರ್ಮ್ ನಲ್ಲಿರುವ ಶಿಮ್ರನ್ ಹೆಟ್ಮಾಯರ್ ಅವರನ್ನು ಉಭಯ ತಂಡಗಳಿಂದಲೂ ಕೈಬಿಡಲಾಗಿದೆ.

Advertisement

ಮೂರು ಪಂದ್ಯಗಳ ಏಕದಿನ ಸರಣಿಗೆ ಗ್ರೆನೇಡಿಯನ್ ಟಾಪ್ ಆರ್ಡರ್ ಬ್ಯಾಟರ್ ಟೆಡ್ಡಿ ಬಿಷಪ್ ಮತ್ತು ಗಯಾನದ ವಿಕೆಟ್ ಕೀಪರ್ ಟೆವಿನ್ ಇಮ್ಲಾಚ್ ಅವರನ್ನು ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ನೀಡಲಾಗಿದೆ.

ಜಸ್ಟಿನ್ ಗ್ರೀವ್ಸ್, ಹೇಡನ್ ವಾಲ್ಶ್ ಜೂನಿಯರ್, ಕವೆಮ್ ಹಾಡ್ಜ್ ಅವರು ಏಕದಿನ ತಂಡದಲ್ಲಿ ಸ್ಥಾನ ಮರಳಿ ಸ್ಥಾನ ಪಡೆದಿದ್ದಾರೆ. ಬ್ರ್ಯಾಂಡನ್ ಕಿಂಗ್ ಮತ್ತು ಶೆರ್ಫನ್ ರುದರ್ ಫೋರ್ಡ್ ಅವರಿಗೆ ಏಕದಿನ ಸರಣಿ ವೇಳೆ ಫ್ರಾಂಚೈಸಿ ಕ್ರಿಕೆಟ್ ಆಡಲು ಅನುಮತಿ ನೀಡಲಾಗಿದೆ. ಆದರೆ ಮೂರು ಪಂದ್ಯಗಳ ಟಿ20 ಸರಣಿಗೆ ಅವರು ತಂಡ ಕೂಡಿಕೊಳ್ಳಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಅಂತಿಮ ಎರಡು ಟಿ20ಗಳಿಗೆ ವಿಶ್ರಾಂತಿ ಪಡೆದಿದ್ದ ಅಲ್ಜಾರಿ ಜೋಸೆಫ್ ಕೂಡ ರೋವ್‌ಮನ್ ಪೊವೆಲ್ ನೇತೃತ್ವದ 20 ಓವರ್‌ಗಳ ತಂಡಕ್ಕೆ ಮರಳಿದ್ದಾರೆ.

ಏಕದಿನ ತಂಡ: ಶಾಯ್ ಹೋಪ್ (ನಾ), ಅಲ್ಜಾರಿ ಜೋಸೆಫ್ (ಉ.ನಾ), ಅಲಿಕ್ ಅಥಾನಾಜೆ, ಟೆಡ್ಡಿ ಬಿಷಪ್, ಕೀಸಿ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಜಸ್ಟಿನ್ ಗ್ರೀವ್ಸ್, ಕವೆಮ್ ಹಾಡ್ಜ್, ಟೆವಿನ್ ಇಮ್ಲಾಚ್, ಗುಡಕೇಶ್ ಮೋಟಿ, ಜಾರ್ನ್ ಓಟ್ಲಿ, ರೊಮಾರಿಯೋ ಶೆಫರ್ಡ್, ಓಶೇನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್.

Advertisement

ಟಿ20 ತಂಡ: ರೋವ್‌ಮನ್ ಪೊವೆಲ್ (ನಾ), ಶಾಯ್ ಹೋಪ್ (ಉ.ನಾ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಅಕೈಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋಟಿ, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಶೆರ್ಫೇನ್ ರುದರ್‌ಫೋರ್ಡ್, ರೊಮಾರಿಯೋ ಶೆಫರ್ಡ್, ಓಶೇನ್ ಥಾಮಸ್.

Advertisement

Udayavani is now on Telegram. Click here to join our channel and stay updated with the latest news.

Next