Advertisement

ಕೋವಿಡ್ ಸೋಂಕು ಹೆಚ್ಚಳ: ಆಸ್ಟ್ರಿಯಾದಲ್ಲಿ ಮತ್ತೆ ಲಾಕ್ ಡೌನ್ ಜಾರಿ

10:52 AM Nov 20, 2021 | Team Udayavani |

ವಿಯೆನ್ನಾ: ಐರೋಪ್ಯ ದೇಶಗಳಲ್ಲೊಂದಾದ ಆಸ್ಟ್ರಿಯಾ, ಬರುವ ಸೋಮವಾರದಿಂದ ಕೋವಿಡ್ ಲಾಕ್‌ಡೌನ್‌ ಜಾರಿಗೊಳಿಸುವುದಾಗಿ ಘೋಷಿಸಿದೆ. ಗುರುವಾರದಂದು ಅಲ್ಲಿ 15,145 ಪ್ರಕರಣಗಳು ದಾಖಲಾಗಿವೆ. ಕಳೆದ ಏಳು ದಿನಗಳಲ್ಲಿ 12,616 ಪ್ರಕರಣಗಳು ಕಂಡುಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ಮೂಲಕ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೊರೊನಾ ಲಾಕ್‌ಡೌನ್‌ ಅನ್ನು ಮರುಜಾರಿಗೊಳಿಸಿದ ಮೊದಲ ದೇಶವಾಗಿ ಆಸ್ಟ್ರಿಯಾ ಹೊರಹೊಮ್ಮಿದೆ.

Advertisement

ಕೆಲವು ದಿನಗಳ ಹಿಂದೆಯೇ ಲಾಕ್‌ಡೌನ್‌ ಜಾರಿಗೊಳಿಸುವ ಬಗ್ಗೆ ನಿರ್ಧರಿಸಿರುವುದಾಗಿ ಹೇಳಲಾಗಿತ್ತಾದರೂ, ಕೇವಲ ಲಸಿಕೆ ಪಡೆಯದವರಿಗಷ್ಟೇ ನಿರ್ಬಂಧಗಳಿರುತ್ತವೆ ಎಂದು ತಿಳಿಸಲಾಗಿತ್ತು. ಆದರೀಗ, ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಲಾಕ್‌ಡೌನ್‌ ನಿಯಮಗಳು ಅನ್ವಯವಾಗುತ್ತವೆ ಎಂದು ಅಲ್ಲಿನ ಪ್ರಧಾನಿ ಅಲೆಕ್ಸಾಂಡರ್‌ ಶಲ್ಲೆನ್‌ಬರ್ಗ್‌ ತಿಳಿಸಿದ್ದಾರೆ.

ಲಸಿಕೆ ಕಡ್ಡಾಯ: ಮುಂದಿನ ವರ್ಷ ಫೆ. 1ರಿಂದ ಕೊರೊನಾ ಲಸಿಕೆಯನ್ನು ಎಲ್ಲರೂ ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮವನ್ನು ಜಾರಿಗೊಳಿಸಲು ಅಲ್ಲಿನ ಸರ್ಕಾರ ನಿರ್ಧರಿಸಿತ್ತು. ಆದರೆ, ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಕಡ್ಡಾಯ ನಿಯಮವನ್ನು ಆದಷ್ಟು ಬೇಗನೇ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.

ಭಾರತ: ಲಸಿಕೆ ಪಡೆದವರೀಗ 115 ಕೋಟಿ!
ಭಾರತದಲ್ಲಿ ಕೊರೊನಾ ಲಸಿಕೆ ಪಡೆದವರ ಸಂಖ್ಯೆ 115 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟು 72,94,864 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈಗ ಲಸಿಕೆ ಪಡೆದವರ ಒಟ್ಟಾರೆ ಸಂಖ್ಯೆ 115.23 ಕೋಟಿ ದಾಟಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಕೈಗೆ ಗಾಯ: ಎರಡನೇ ಟಿ20ಯಿಂದ ಸಿರಾಜ್ ಹೊರಗೆ;ಹರ್ಷಲ್ ಪಟೇಲ್ ಪಾದಾರ್ಪಣೆ

Advertisement

11 ಸಾವಿರ ಹೊಸ ಕೇಸ್‌:
ಗುರುವಾರ-ಶುಕ್ರವಾರದ 24 ಗಂಟೆಗಳಲ್ಲಿ ಭಾರತದಲ್ಲಿ 11,106 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದೇ ಅವಧಿಯಲ್ಲಿ 459 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದರೆ, 12,789 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ಬಾರಿ, ಕೊರೊನಾದಿಂದ ಅತಿ ಹೆಚ್ಚು ಬಾಧಿತವಾಗಿರುವ ಕೇರಳದಲ್ಲಿ 24 ಗಂಟೆಗಳಲ್ಲಿ 6,111 ಹೊಸ ಕೇಸ್‌ಗಳು ಪತ್ತೆಯಾಗಿದ್ದು, 51 ಸಾವು, 7202 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಆಸ್ಟ್ರಾಝೆನಿಕಾದಿಂದ ಶೇ. 83ರಷ್ಟು ರಕ್ಷಣೆ
ಕೊರೊನಾ ಲಸಿಕೆಯಾದ ಆಸ್ಟ್ರಾಝೆನಿಕಾದಿಂದ ಶೇ. 83ರಷ್ಟು ರಕ್ಷಣೆ ಸಿಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಲ್ಲದೆ, ಇದರ ರಕ್ಷಣಾ ಶಕ್ತಿ ಆರು ತಿಂಗಳಿಗೂ ಮೀರಿರುತ್ತದೆ ಎಂದು ಅವರು ಹೇಳಿದ್ದಾರೆ.

ಕೊರೊನಾ ಮೂಲ ಇಲ್ಲೇ!
ಕೊರೊನಾ ಉಗಮ ಸ್ಥಾನದ ಬಗ್ಗೆ ನಡೆಯುತ್ತಿರುವ ಸಂಶೋಧನಾ ವರದಿಯು ಅಲ್ಲಿ ಇಲ್ಲಿ ಓಡಾಡಿ ಈಗ ಪುನಃ ವುಹಾನ್‌ನ ಮಾರುಕಟ್ಟೆಗೇ ಬಂದು ನಿಂತಿದೆ! ವುಹಾನ್‌ನಲ್ಲಿರುವ ಮಾರುಕಟ್ಟೆಯಲ್ಲಿನ ಸಮುದ್ರ ಆಹಾರಗಳನ್ನು ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರ ಅಂಗಡಿಯಿಂದಲೇ ಕೊರೊನಾ ಉಗಮವಾಗಿದೆ ಎಂಬ ನಿರ್ಧಾರಕ್ಕೆ ಸಂಶೋಧಕರ ತಂಡವೊಂದು ಬಂದಿದೆ. ಇನ್ನು, ಈತ ಆಗಾಗ ಸಮುದ್ರ ಆಹಾರ ಖರೀದಿಸುತ್ತಿದ್ದ ಅಂಗಡಿಯ ಮಹಿಳೆಗೂ ಡಿ.11ರಂದು ಕೊರೊನಾ ಸಂಬಂಧಿತ ಗುಣಲಕ್ಷಣಗಳು ಕಾಣಿಸಿಕೊಂಡಿದ್ದವು. ಕೊರೊನಾಕ್ಕೆ ಸಂಬಂಧಿಸಿದಂತೆ ಈ ಪ್ರಕರಣಗಳೇ ಮೊದಲು ದಾಖಲಾಗಿದ್ದು. ಹಾಗಾಗಿ, ಕೊರೊನಾ ಉಗಮ ಇದೇ ಅಂಗಡಿಯಲ್ಲಿ ಆಗಿರಬಹುದು ಎಂದು ಸಂಶೋಧಕರ ತಂಡವೊಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next