Advertisement

ಆಸ್ಟ್ರೇಲಿಯದ ಶೆಫೀಲ್ಡ್‌ ಶೀಲ್ಡ್‌ ಕ್ರಿಕೆಟ್‌ ಟೂರ್ನಿ ರದ್ದು

10:06 AM Mar 16, 2020 | sudhir |

ಮೆಲ್ಬರ್ನ್: ಆಸ್ಟ್ರೇಲಿಯದ ಅಗ್ರಮಾನ್ಯ ದೇಶಿ ಪಂದ್ಯಾವಳಿಯಾದ “ಶೆಫೀಲ್ಡ್‌ ಶೀಲ್ಡ್‌ ಕ್ರಿಕೆಟ್‌ ಟೂರ್ನಿ’ ಕೊರೊನಾ ವೈರಸ್‌ನಿಂದಾಗಿ ರದ್ದುಗೊಂಡಿದೆ. ದ್ವಿತೀಯ ಮಹಾಯುದ್ಧದ ಬಳಿಕ ಈ ಪ್ರತಿಷ್ಠಿತ ಕ್ರಿಕೆಟ್‌ ಪಂದ್ಯಾವಳಿ ರದ್ದುಗೊಂಡದ್ದು ಇದೇ ಮೊದಲು.

Advertisement

ಆದರೆ “ಕ್ರಿಕೆಟ್‌ ಆಸ್ಟ್ರೇಲಿಯ’ ಇದನ್ನಿನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ವೇಳಾಪಟ್ಟಿ ಪ್ರಕಾರ ಈ ಕೂಟದ ಅಂತಿಮ ಸುತ್ತಿನ ಸ್ಪರ್ಧೆ ಮಾ. 17ರಿಂದ ಆರಂಭವಾಗಬೇಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟ್‌ ಆಸ್ಟ್ರೇಲಿಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆವಿನ್‌ ರಾಬರ್ಟ್ಸ್, “ಕೊರೊನಾ ವೈರಸ್‌ ವಿಶ್ವಾದ್ಯಂತ ಹಬ್ಬುತ್ತಿದೆ. ಹೀಗಾಗಿ ಪ್ರಯಾಣ, ಪ್ರವಾಸವನ್ನು ಕಡಿಮೆ ಮಾಡುವುದು ಕ್ಷೇಮ. ಇದೇ ಉದ್ದೇಶದಿಂದ ಶೆಫೀಲ್ಡ್‌ ಶೀಲ್ಡ್‌ ಕ್ರಿಕೆಟ್‌ ಪಂದ್ಯಾವಳಿಯ ಅಂತಿಮ ಸುತ್ತಿನ ಸ್ಪರ್ಧೆಗಳನ್ನು ರದ್ದುಗೊಳಿಸಬೇಕಾಗುತ್ತದೆ. ಕೊರೊನಾ ತಡೆಯುವ ನಿಟ್ಟಿನಲ್ಲಿ ಇದು ನಮ್ಮ ಕರ್ತವ್ಯವೂ ಹೌದು’ ಎಂದಿದ್ದಾರೆ.

ಕಳೆದ ವಾರ ಪರ್ತ್‌ನ “ವಾಕಾ’, ಅಡಿಲೇಡ್‌ನ‌
“ಕರೆನ್‌ ರೋಲ್ಟನ್‌ ಓವಲ್‌’, ಮೆಲ್ಬರ್ನ್ನ “ಜಂಕ್ಷನ್‌ ಓವಲ್‌’ನಲ್ಲಿ ಪ್ರೇಕ್ಷಕರನ್ನು ನಿರ್ಬಂಧಿಸಿ ಪಂದ್ಯಗಳನ್ನು ಆಡಲಾಗಿತ್ತು.

ಮಂಗಳವಾರದಿಂದ ಕ್ವೀನ್ಸ್‌ಲ್ಯಾಂಡ್‌, ಪರ್ತ್‌ ಮತ್ತು ಟಾಸೆ¾àನಿಯಾದಲ್ಲಿ ಅಂತಿಮ ಸುತ್ತಿನ ಪಂದ್ಯಗಳನ್ನು ಆಡಬೇಕಿತ್ತು.

Advertisement

ಚಾಂಪಿಯನ್‌ ಪಟ್ಟ ಯಾರಿಗೆ?
ಶೆಫೀಲ್ಡ್‌ ಶೀಲ್ಡ್‌ ಪಂದ್ಯಾವಳಿಯನ್ನು ರದ್ದುಗೊಳಿಸಿದರೆ ಚಾಂಪಿಯನ್‌ ತಂಡವನ್ನು ನಿರ್ಧರಿಸುವುದು ಹೇಗೆ ಅಥವಾ ಈ ಬಾರಿ ಪ್ರಶಸ್ತಿಯನ್ನು ತಡೆಹಿಡಿಯಲಾಗುವುದೇ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಕುತೂಹಲ. ಒಂದು ಮೂಲದ ಪ್ರಕಾರ, ಕೂಟದಲ್ಲಿ ಈವರೆಗೆ ಅಗ್ರಸ್ಥಾನವನ್ನು ಕಾಯ್ದುಕೊಂಡು ಬಂದ ತಂಡವನ್ನು ಚಾಂಪಿಯನ್‌ ಎಂದು ಘೋಷಿಸುವ ಸಾಧ್ಯತೆ ಇದೆ. ಆಗ ಈ ಹೆಗ್ಗಳಿಕೆ ನ್ಯೂ ಸೌತ್‌ ವೇಲ್ಸ್‌ ಬ್ಲೂಸ್‌ ತಂಡದ ಪಾಲಾಗುತ್ತದೆ. ಆಗ ಇದು ನ್ಯೂ ಸೌತ್‌ ವೇಲ್ಸ್‌ಗೆ ಒಲಿಯುವ 47ನೇ ಪ್ರಶಸ್ತಿಯಾಗಲಿದೆ. 2013-14ರ ಬಳಿಕ ಈ ತಂಡ ಶೆಫೀಲ್ಡ್‌ ಶೀಲ್ಡ್‌ ಚಾಂಪಿಯನ್‌ ಆಗಿಲ್ಲ.

ಹಾಲಿ ಚಾಂಪಿಯನ್‌ ವಿಕ್ಟೋರಿಯಾ ಕಳೆದ 5 ಋತುಗಳಲ್ಲಿ 4 ಸಲ ಚಾಂಪಿಯನ್‌ ಆಗಿ ಪಾರಮ್ಯ ಮೆರೆದಿದೆ. ಕಳೆದ ವರ್ಷ ಮೆಲ್ಬರ್ನ್ನಲ್ಲಿ ನಡೆದ ಪ್ರಶಸ್ತಿ ಕಾಳಗದಲ್ಲಿ ಅದು ನ್ಯೂ ಸೌತ್‌ ವೇಲ್ಸ್‌ ಬ್ಲೂಸ್‌ ತಂಡವನ್ನು ಪರಾಭವಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next