Advertisement
ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್, ವನಿತಾ ವಿಭಾಗದ ನೆಚ್ಚಿನ ತಾರೆಯರಾದ ಸೆರೆನಾ ಮತ್ತು ನವೋಮಿ ಒಸಾಕಾ ಕೂಡ ಸೆಮಿ ಸೆಣಸಾಟಕ್ಕೆ ಅಣಿಯಾಗಿದ್ದಾರೆ.
Related Articles
Advertisement
“ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲೇ ಸೆಮಿಫೈನಲ್! ನಿಜಕ್ಕೂ ನಂಬಲಾಗುತ್ತಿಲ್ಲ. ಆದರೆ ನನ್ನ ಗುರಿ ಏನಿದ್ದರೂ ವಿಶ್ವ ರ್‍ಯಾಂಕಿಂಗ್‌ನಲ್ಲಿ ನೂರರೊಳಗಿನ ಸ್ಥಾನ ಅಲಂಕರಿಸುವುದು’ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ ಅಸ್ಲಾನ್ ಕರತ್ಸೇವ್.
ಜೊಕೋವಿಕ್ ಎದುರಾಳಿಕರೆತ್ಸೇವ್ ಅವರ ಸೆಮಿಫೈನಲ್ ಎದುರಾಳಿ ಬೇರೆ ಯಾರೂ ಅಲ್ಲ, ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್. ರಶ್ಯದ ಅಪಾಯಕಾರಿ ಟೆನಿಸಿಗ ಗ್ರ್ಯಾನ್‌ಸ್ಲಾಮ್ ಇತಿಹಾಸದ ಬಹು ದೊಡ್ಡ ಏರುಪೇರಿಗೆ ಕಾರಣರಾಗಬಲ್ಲರೇ ಎಂಬುದೊಂದು ಕುತೂಹಲ! ದಿನದ ದ್ವಿತೀಯ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೋವಿಕ್ ತೀವ್ರ ಸ್ಪರ್ಧೆಯೊಡ್ಡಿದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು 6-7 (6-8), 6-2, 6-4, 7-6 (8-6)ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಜೊಕೋಗೆ ಇದು 9ನೇ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್. ಸೆರೆನಾ-ಒಸಾಕಾ ಮುಖಾಮುಖೀ
ಮಂಗಳವಾರ ನಡೆದ ವನಿತಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದು ಬಂದ ಸೆರೆನಾ ವಿಲಿಯಮ್ಸ್ ಮತ್ತು ನವೋಮಿ ಒಸಾಕಾ ಸೆಮಿಫೈನಲ್‌ನಲ್ಲಿ ಮುಖಾಮುಖೀಯಾಗಲಿದ್ದಾರೆ. ಸೆರೆನಾ ವಿಲಿಯಮ್ಸ್ ವಿಶ್ವದ ನಂ.2 ಆಟಗಾರ್ತಿ ಸಿಮೋನಾ ಹಾಲೆಪ್ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಮಣಿಸಿ 2017ರ ಬಳಿಕ ಮೊದಲ ಸಲ “ಮೆಲ್ಬರ್ನ್ ಪಾರ್ಕ್’ ಉಪಾಂತ್ಯ ತಲುಪಿದರು. ನವೋಮಿ ಒಸಾಕಾ ಕೂಡ ಸುಲಭ ಜಯ ಸಾಧಿಸಿದರು. ತೈವಾನ್‌ನ ಸೀ ಸು ವೀ ಅವರನ್ನು 6-2, 6-2ರಿಂದ ಮಣಿಸಿದರು.