Advertisement

ಆಸ್ಟ್ರೇಲಿಯ ವನಿತಾ ಕ್ರಿಕೆಟ್‌ ತಂಡದ ಸ್ಪಿನ್ನರ್‌ ಜೆಸ್‌ ಜೊನಾಸೆನ್‌ಗೆ ಕೋವಿಡ್

11:52 PM Jul 12, 2022 | Team Udayavani |

ಬ್ರಿಸ್ಬೇನ್‌: ಆಸ್ಟ್ರೇಲಿಯ ವನಿತಾ ಕ್ರಿಕೆಟ್‌ ತಂಡದ ಸ್ಪಿನ್ನರ್‌ ಜೆಸ್‌ ಜೊನಾಸೆನ್‌ಗೆ ಕೊರೊನಾ ಅಂಟಿಕೊಂಡಿದೆ. ಹೀಗಾಗಿ ತ್ರಿಕೋನ ಸರಣಿಗಾಗಿ ಐರ್ಲೆಂಡ್‌ಗೆ ವಿಮಾನ ಏರಬೇಕಿದ್ದ ಅವರು ಕೊನೆಯ ಗಳಿಗೆಯಲ್ಲಿ ಬ್ರಿಸ್ಬೇನ್‌ನಲ್ಲೇ ಉಳಿಯುವಂತಾಗಿದೆ.

Advertisement

ಪಾಕಿಸ್ಥಾನವನ್ನೊಳಗೊಂಡ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯ ತಂಡ ಪಾಲ್ಗೊಳ್ಳಲಿದೆ. ಮೊದಲೆರಡು ಪಂದ್ಯಗಳಿಂದ ಜೊನಾಸೆನ್‌ ಹೊರಗುಳಿಯಲಿದ್ದಾರೆ.

ಜೊನಾಸೆನ್‌ ಬದಲು ಆಲ್‌ರೌಂಡರ್‌ ಹೀತರ್‌ ಗ್ರಹಾಂ ಆಸ್ಟ್ರೇಲಿಯ ತಂಡವನ್ನು ಕೂಡಿಕೊಂಡಿದ್ದಾರೆ. ಐಸೊಲೇಶನ್‌ ಮುಗಿದ ಬಳಿಕ ಜೊನಾಸೆನ್‌ ತಂಡವನ್ನು ಕೂಡಿಕೊಳ್ಳುವರು.

Advertisement

Udayavani is now on Telegram. Click here to join our channel and stay updated with the latest news.

Next