ಸಿಡ್ನಿ: ಆಸ್ಟ್ರೇಲಿಯದ ವೇಗಿ ಜೇಮ್ಸ್ ಪ್ಯಾಟಿನ್ಸನ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದರು. ಫಿಟ್ನೆಸ್ ಸಮಸ್ಯೆಯಿಂದ ಮುಂಬರುವ ಆ್ಯಶಸ್ ಸರಣಿಯಲ್ಲಿ ಆಡಲು ಸಾಧ್ಯವಿಲ್ಲದ ಕಾರಣ ಅವರು ಈ ನಿರ್ಧಾರಕ್ಕೆ ಬಂದರು.
31 ವರ್ಷದ ಪ್ಯಾಟಿನ್ಸನ್ 21 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದು, ಕ್ರಮವಾಗಿ 81 ಹಾಗೂ 16 ವಿಕೆಟ್ ಉರುಳಿಸಿದ್ದಾರೆ.
ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ 2011ರ ಬ್ರಿಸ್ಬೇನ್ ಪಂದ್ಯದಲ್ಲಿ ಪ್ಯಾಟಿನ್ಸನ್ ಟೆಸ್ಟ್ ಪದಾರ್ಪಣೆ ಮಾಡಿದ್ದರು. ಮಿಚೆಲ್ ಸ್ಟಾರ್ಕ್ ಮತ್ತು ಡೇವಿಡ್ ವಾರ್ನರ್ ಅವರಿಗೂ ಇದು ಚೊಚ್ಚಲ ಟೆಸ್ಟ್ ಆಗಿತ್ತು.
ಕಳೆದ ವರ್ಷ ನ್ಯೂಜಿಲ್ಯಾಂಡ್ ವಿರುದ್ಧವೇ ಪ್ಯಾಟಿನ್ಸನ್ ಕೊನೆಯ ಟೆಸ್ಟ್ ಆಡಿದರು. ಅಂತಿಮ ಏಕದಿವನ್ನು 2015ರಷ್ಟು ಹಿಂದೆ ಇಂಗ್ಲೆಂಡ್ ಪ್ರವಾಸದ ವೇಳೆ ಲೀಡ್ಸ್ನಲ್ಲಿ ಆಡಿದ್ದರು.
ಇದನ್ನೂ ಓದಿ:ಭಾರತದಲ್ಲಿ ಡ್ರೈವರ್ಲೆಸ್ ಬೈಕ್?!