Advertisement

ಆ್ಯಶ್ಲಿ ಬಾರ್ಟಿ-ವೊಂಡ್ರೂಸೋವಾ: ಫೈನಲ್‌ ಹಣಾಹಣಿ

12:51 AM Jun 08, 2019 | Sriram |

ಪ್ಯಾರಿಸ್‌: ಈ ಬಾರಿಯ ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌ ನೂತನ ಚಾಂಪಿಯನ್‌ ಒಬ್ಬರನ್ನು ಕಾಣಲಿದೆ. ಶನಿವಾರದ ಪ್ರಶಸ್ತಿ ಸಮರ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಮತ್ತು ಜೆಕ್‌ ಗಣರಾಜ್ಯದ ಮಾರ್ಕೆಟಾ ವೊಂಡ್ರೂಸೋವಾ ನಡುವೆ ನಡೆಯಲಿದ್ದು, ಯಾರೇ ಗೆದ್ದರೂ ನೂತನ “ಪ್ಯಾರಿಸ್‌ ರಾಣಿ’ ಎನಿಸಲಿದ್ದಾರೆ. ಇವರಿಬ್ಬರ ಪಾಲಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಎಂಬುದು ವಿಶೇಷ.

Advertisement

ಸೆಮಿಫೈನಲ್‌ ಹಣಾಹಣಿಯಲ್ಲಿ ಆ್ಯಶ್ಲಿ ಬಾರ್ಟಿ ಅಮೆರಿಕದ 17ರ ಹರೆಯದ ಅಮಂಡಾ ಅನಿಸಿಮೋವಾ ಅವರನ್ನು 6-7 (4), 6-3, 6-3 ಅಂತರದಿಂದ ಮಣಿಸಿದರು. ಅನಿಸಿಮೋವಾ ಹಾಲಿ ಚಾಂಪಿಯನ್‌ ಸಿಮೋನಾ ಹಾಲೆಪ್‌ಗೆ ಆಘಾತವಿಕ್ಕಿದ್ದರು.

1973ರ ಬಳಿಕ ಇಲ್ಲಿ ಮೊದಲ ಸಲ ಚಾಂಪಿಯನ್‌ ಆಗುವ ಅವಕಾಶ ವೊಂದು ಆಸ್ಟ್ರೇಲಿಯನ್‌ ಆಟಗಾರ್ತಿಗೆ ಎದುರಾಗಿದೆ. ಅಂದು ಮಾರ್ಗರೆಟ್‌ ಕೋರ್ಟ್‌ ಚಾಂಪಿಯನ್‌ ಆಗಿ ಮೂಡಿ ಬಂದಿದ್ದರು. 2010ರಲ್ಲಿ ಕಾಂಗರೂ ನಾಡಿನ ಸಮಂತಾ ಸ್ಟೋಸರ್‌ ಫೈನಲ್‌ ತಲುಪಿದ್ದರೂ ಪ್ರಶಸ್ತಿ ಜಯಿಸಲು ವಿಫ‌ಲರಾಗಿದ್ದರು.ಇನ್ನೊಂದು ಸೆಮಿಫೈನಲ್‌ನಲ್ಲಿ ಮಾರ್ಕೆಟಾ ಬ್ರಿಟನ್ನಿ ನ ಜೊಹಾನಾ ಕೊಂಟಾ ಅವರನ್ನು 7-5, 7-6 (7-2) ಅಂತರದಿಂದ ಮಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next