Advertisement

1st Test; ಪಾಕ್ ವಿರುದ್ಧ ಆಲ್ ರೌಂಡ್ ಪ್ರದರ್ಶನ: ಆಸೀಸ್ ಗೆ 360 ರನ್‌ಗಳ ಜಯ

04:18 PM Dec 17, 2023 | Team Udayavani |

ಪರ್ತ್‌ : ಇಲ್ಲಿನ ಆಪ್ಟಸ್ ಸ್ಟೇಡಿಯಂನಲ್ಲಿ ಪ್ರವಾಸಿ ಪಾಕಿಸ್ಥಾನದ ಎದುರು ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿದ ಆಸ್ಟ್ರೇಲಿಯ ಡಿ17 ರಂದು( ಭಾನುವಾರ) 360 ರನ್‌ಗಳ ಅಮೋಘ ಜಯ ಸಾಧಿಸಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿ ಆಸ್ಟ್ರೇಲಿಯ 487 ರನ್ ಗಳಿಗೆ ಆಲೌಟಾಗಿತ್ತು. ಪಾಕಿಸ್ಥಾನ ಮೊದಲ ಇನ್ನಿಂಗ್ಸ್ ನಲ್ಲಿ 271 ರನ್ ಗಳಿಗೆ ಆಲೌಟಾಗಿತ್ತು. ಆಸೀಸ್ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ 233 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಪಾಕಿಸ್ಥಾನ ಎರಡನೇ ಇನ್ನಿಂಗ್ಸ್ ನಲ್ಲಿ 30.2 ಓವರ್ ಗಳಲ್ಲಿ ಕೇವಲ 89 ರನ್ ಗಳಿಗೆ ಆಲೌಟಾಗಿ ಸೋಲಿಗೆ ಶರಣಾಯಿತು. ಮಿಚೆಲ್ ಮಾರ್ಷ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ಮೊದಲ ಇನ್ನಿಂಗ್ಸ್ ನಲ್ಲಿ 90 ರನ್, ಎರಡನೇ ಇನ್ನಿಂಗ್ಸ್ ನಲ್ಲಿ ಔಟಾಗದೆ 63 ರನ್ ಗಳಿಸಿದ್ದರು.

ಅನುಭವಿ ಆಫ್-ಸ್ಪಿನ್ನರ್ ನಥನ್ ಲಿಯಾನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 500 ವಿಕೆಟ್‌ಗಳನ್ನು ಪಡೆದ 8ನೇ ಬೌಲರ್, 2 ನೇ ಆಫ್ ಸ್ಪಿನ್ನರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಅವರು ಸ್ಪಿನ್ ದಂತಕಥೆ ಶೇನ್ ವಾರ್ನ್ ನಂತರ ಈ ಸಾಧನೆ ಮಾಡಿದ ಆಸ್ಟ್ರೇಲಿಯದ ಎರಡನೇ ಸ್ಪಿನ್ನರ್ ಆಗಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ 500 ಟೆಸ್ಟ್ ವಿಕೆಟ್‌ಗಳನ್ನು ಪಡೆದ ನಾಲ್ಕನೇ ಸ್ಪಿನ್ನರ್ ಆಗಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ಥಾನದ ಬ್ಯಾಟ್ಸ್ ಮ್ಯಾನ್ ಫಾಹೀಮ್ ಅಶ್ರಫ್ ಅವರ ವಿಕೆಟ್ ಪಡೆದು ಐತಿಹಾಸಿಕ ಸಾಧನೆಯನ್ನು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next