Advertisement

ಆರ್ಥಿಕ ಸಂಕಷ್ಟ: ಶ್ರೀಲಂಕಾದ ಮಕ್ಕಳ ನೆರವಿಗೆ ಬಂದ ಆಸೀಸ್ ಕ್ರಿಕೆಟಿಗರು

07:09 PM Aug 11, 2022 | Team Udayavani |

ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದ ದಶಕಗಳಲ್ಲೇ ಕೆಟ್ಟದಾದ ಆರ್ಥಿಕ ಬಿಕ್ಕಟ್ಟಿನ ದುಷ್ಪರಿಣಾಮಕ್ಕೆ ಗುರಿಯಾಗಿರುವ ಮಕ್ಕಳು ಮತ್ತು ಕುಟುಂಬಗಳನ್ನು ಬೆಂಬಲಿಸಲು ಇತ್ತೀಚಿನ ಎಲ್ಲಾ ತರದ ಪ್ರವಾಸದಿಂದ ಬಂದ ತಮ್ಮ ಬಹುಮಾನದ ಹಣವನ್ನು ದಾನ ಮಾಡಿದ್ದೇವೆ ಎಂದು ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಆಟಗಾರರು ಗುರುವಾರ ಹೇಳಿದ್ದಾರೆ.

Advertisement

ಯುನಿಸೆಫ್ ಆಸ್ಟ್ರೇಲಿಯಾ ರಾಯಭಾರಿಯಾಗಿರುವ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಏಕದಿನ ತಂಡದ ನಾಯಕ ಆರನ್ ಫಿಂಚ್ ನೇತೃತ್ವದಲ್ಲಿ ದೇಣಿಗೆ ನೀಡಲಾಗುವುದು. ಒಟ್ಟಾರೆಯಾಗಿ, ತಂಡವು ಸಂಸ್ಥೆಯ ಶ್ರೀಲಂಕಾ ಮನವಿಗೆ 45,000 ಆಸ್ಟ್ರೇಲಿಯನ್ ಡಾಲರ್‌ಗಳನ್ನು ( 25,36,294 ಲಕ್ಷ ರೂ.) ದೇಣಿಗೆ ನೀಡಿದೆ.

ಆಸ್ಟ್ರೇಲಿಯಾದ ಕ್ರಿಕೆಟಿಗರು ನೀಡಿದ ದೇಣಿಗೆಯು 1.7 ಮಿಲಿಯನ್ ದುರ್ಬಲ ಶ್ರೀಲಂಕಾದ ಮಕ್ಕಳ ಪೋಷಣೆ, ಆರೋಗ್ಯ ರಕ್ಷಣೆ, ಸುರಕ್ಷಿತ ಕುಡಿಯುವ ನೀರು, ಶಿಕ್ಷಣ ಮತ್ತು ಮಾನಸಿಕ ಆರೋಗ್ಯ ಸೇವೆಗಳನ್ನು ಬೆಂಬಲಿಸಲು ಯುನಿಸೆಫ್ ನ ಕಾರ್ಯಕ್ರಮಗಳಿಗೆ ವಿನಿಯೋಗವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next