Advertisement

ಕಿತ್‌ನಾ ಅಚ್ಛಾ ಹೇ ಮೋದಿ :ಆಸೀಸ್‌ ಪ್ರಧಾನಿ ಸೆಲ್ಫಿ ವೈರಲ್‌!

10:05 AM Jul 01, 2019 | Vishnu Das |

ಒಸಾಕಾ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಕೋಟ್ಯಾಂತರ ಮಂದಿ ಇಚ್ಛಿಸುತ್ತಾರೆ. ಆ ಭಾಗ್ಯ ಎಲ್ಲರಿಗೂ ಲಭ್ಯವಾಗುವುದಿಲ್ಲ. ಆದರೆ ಮೋದಿ ಅವರು ಸಿನಿ ತಾರೆಗಳು, ರಾಜಕಾರಣಿಗಳೊಂದಿಗೆ ತೆಗೆಸಿಕೊಂಡ ಸೆಲ್ಫಿಗಳು ವೈರಲ್‌ ಆಗಿ ಹೆಡ್‌ಲೈನ್‌ ಆಗಿವೆ.

Advertisement

ಜಪಾನ್‌ನ ಜಿ-20 ಶೃಂಗ ಸಭೆಯಲ್ಲೂ  ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದಿಗ್ಗಜ ನಾಯಕರು ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕೋಟ್‌ ಮೊರಿಸನ್‌ ಅವರು ಸೆಲ್ಫಿ ತೆಗೆದುಕೊಂಡು ಕಿತ್ನಾ ಅಚ್ಛಾ ಹೇ ಮೋದಿ ಎಂದು ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ.ಟ್ವೀಟ್‌ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ.

ಉಭಯ ನಾಯಕರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next