Advertisement
ಆತಿಥೇಯ ನಾಡಿವ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ 74 ನಿಮಿಷಗಳ ಹೋರಾಟದ ಬಳಿಕ ಅಮೆರಿಕದ ಅಮಂಡಾ ಅನಿಸಿಮೋವಾ ಆಟವನ್ನು 6-4, 6-3ರಿಂದ ಕೊನೆಗೊಳಿಸಿದರು. ಹಾಲಿ ಚಾಂಪಿಯನ್ ನವೋಮಿ ಒಸಾಕಾ ಅವರನ್ನು ಮಣಿಸುವ ಮೂಲಕ ಅನಿಸಿಮೋವಾ ಭಾರೀ ಸುದ್ದಿಯಾಗಿದ್ದರು. ಇದಕ್ಕೂ ಮೊದಲು 2019ರ ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಅನಿಸಿಮೋವಾಗೆ ಸೋಲುಣಿಸಿದ ಬಾರ್ಟಿ, ಅಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಎತ್ತಿದ್ದರು.
Related Articles
ರಫೆಲ್ ನಡಾಲ್ 14ನೇ ಸಲ “ಮೆಲ್ಬರ್ನ್ ಪಾರ್ಕ್’ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. ಫ್ರಾನ್ಸ್‌ನ ಆ್ಯಡ್ರಿಯನ್ ಮನ್ನಾರಿನೊ ವಿರುದ್ಧ ಮೊದಲ ಸೆಟ್‌ನಲ್ಲಿ ಸ್ಪೇನಿಗ ಭಾರೀ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಮುಂದಿನ ಸೆಟ್‌ಗಳನ್ನು ಸುಲಭದಲ್ಲಿ ವಶಪಡಿಸಿಕೊಂಡರು. ಅಂತರ 7-6 (16-14), 6-2, 6-2.
Advertisement
ನಡಾಲ್ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಕೆನಡಾದ ಡೆನ್ನಿಸ್ ಶಪೊವಲೋವ್. ಅವರು ಅಲೆಕ್ಸಾಂಡರ್ ಜ್ವೆರೇವ್‌ಗೆ 6-3, 7-6 (7-5), 6-3ರಿಂದ ಸೋಲುಣಿಸಿದರು. ದಿನದ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್ ಸರ್ಬಿಯಾದ ಮಿಯೋಮಿರ್ ಕೆಮನೋವಿಕ್ ವಿರುದ್ಧ 7-5, 7-6 (7-4), 6-3ರಿಂದ ಮೇಲುಗೈ ಸಾಧಿಸಿದರು
ಕ್ವಾರ್ಟರ್ ಫೈನಲ್‌ಗೆ ಸಾನಿಯಾ-ರಾಜೀವ್ ರಾಮ್ಸಾನಿಯಾ ಮಿರ್ಜಾ ಮತ್ತು ಅವರ ಅಮೆರಿಕನ್ ಜತೆಗಾರ ರಾಜೀವ್ ರಾಮ್ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ರವಿವಾರದ ದ್ವಿತೀಯ ಸುತ್ತಿನ ಮುಖಾಮುಖಿಯಲ್ಲಿ ಇವರು ಎಲೆನ್ ಪೆರೆಝ್-ಮಿಡ್ಲ್ಕೂಪ್ ವಿರುದ್ಧ ದಿಟ್ಟ ಹೋರಾಟವೊಂದನ್ನು ಪ್ರದರ್ಶಿಸಿ 7-6 (8-6), 6-4 ಅಂತರದ ಗೆಲುವು ಸಾಧಿಸಿದರು. ಕ್ವಾ.ಫೈನಲ್‌ನಲ್ಲಿ ಸಾನಿಯಾ-ರಾಜೀವ್ ರಾಮ್ ಆಸ್ಟ್ರೇಲಿಯನ್ ಜೋಡಿಯೊಂದನ್ನು ಎದುರಿಸಬೇಕಿದೆ. ಇಲ್ಲಿ ಆತಿಥೇಯ ನಾಡಿನ ಸಮಂತಾ ಸ್ಟೋಸರ್-ಮ್ಯಾಥ್ಯೂ ಹಾಗೂ ಜೇಮಿ ಫೋರ್ಲಿಸ್-ಜಾಸನ್ ಕ್ಯುಬ್ಲಿರ್ ಜೋಡಿ ಮುಖಾಮುಖೀ ಆಗಲಿದೆ.