Advertisement
ಸಾನಿಯಾ-ಡ್ಯಾನಿಲಿನಾ ದ್ವಿತೀಯ ಸುತ್ತಿನಲ್ಲಿ ಅನೆಲಿನಾ ಕಲಿನಿನಾ (ಉಕ್ರೇನ್)-ಅಲಿಸನ್ ವಾನ್ ಯುಟ್ವಾಂಕ್ (ಬೆಲ್ಜಿಯಂ) ಸವಾಲನ್ನು ಎದುರಿಸಲಿದ್ದಾರೆ. 36 ವರ್ಷದ ಸಾನಿಯಾ ಮಿರ್ಜಾ ಮಿಕ್ಸೆಡ್ ಡಬಲ್ಸ್‌ನಲ್ಲೂ ಆಡಲಿದ್ದು, ಇಲ್ಲಿ ಭಾರತದವರೇ ಆದ ರೋಹನ್ ಬೋಪಣ್ಣ ಜೋಡಿ ಆಗಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಭಾರತ ಸೋಲನುಭವಿಸಿದೆ. ಮೊದಲ ಸಲ ಗ್ರ್ಯಾನ್‌ಸ್ಲಾéಮ್‌ನಲ್ಲಿ ಜತೆಗೂಡಿ ಆಡಲಿಳಿದ ಯುಕಿ ಭಾಂಬ್ರಿ-ಸಾಕೇತ್ ಮೈನೆನಿ 14ನೇ ಶ್ರೇಯಾಂಕದ ಜಾನ್ ಪೀಯರ್ (ಆಸ್ಟ್ರೇಲಿಯ)-ಆ್ಯಂಡ್ರಿಯ ಮೀಸ್ (ಜರ್ಮನಿ) ವಿರುದ್ಧ 6-7 (5), 7-6 (4), 3-6 ಅಂತರದಿಂದ ಎಡವಿದರು. ಮೆಕ್ಸಿಕೊದ ಮಿಗ್ಯುಯೆಲ್ ಏಂಜೆಲ್ ರಿಯೆಸ್ ವರೇಲ ಅವರೊಂದಿಗೆ ಆಡಲಿಳಿದ ರಾಮ್‌ಕುಮಾರ್ ರಾಮನಾಥನ್ ಕೂಡ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಸಿಸಿಪಸ್ ಸೋದರರಾದ ಸ್ಟೆಫನಸ್-ಪೆಟ್ರೋಸ್ ಈ ಪಂದ್ಯವನ್ನು 3-6, 7-5, 6-3ರಿಂದ ಗೆದ್ದರು.