Advertisement
ಅಗ್ರ 30ರೊಳಗಿನ ಆಟಗಾರನನ್ನು ಸೋಲಿಸಿ ಅಚ್ಚರಿಗೊಳಿಸಿದ್ದ ನಾಗಲ್ ದ್ವಿತೀಯ ಸುತ್ತಿನಲ್ಲೂ ಅದೇ ರೀತಿಯ ಹೋರಾಟ ನೀಡಲು ಪ್ರಯತ್ನಿಸಿದರೂ ಎಡವಿದರು. 18ರ ಹರೆಯದ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಶಾನ್ ಪಂದ್ಯ ಸಾಗುತ್ತಿದ್ದಂತೆ ಹಿಡಿತ ಸಾಧಿಸಿ 2-6, 6-3, 7-5, 6-4 ಸೆಟ್‌ಗಳಿಂದ ಪಂದ್ಯ ಗೆದ್ದರು.
ಹರಿಯಾಣದ ಝಜ್ಜಾರ್ ಮೂಲದ 26ರ ಹರೆಯದ ನಾಗಲ್ ಅವರು ಅರ್ಹತಾ ಸುತ್ತಿನಲ್ಲಿ ಅಮೋಘವಾಗಿ ಆಡಿ ಮುಖ್ಯ ಡ್ರಾಕ್ಕೆ ಪ್ರವೇಶ ಪಡೆದಿದ್ದರು. ಅಲ್ಲಿ ಮೊದಲ ಸುತ್ತಿನಲ್ಲಿ ವಿಶ್ವದ 27ನೇ ರ್‍ಯಾಂಕಿನ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಸೋಲಿಸಿ ಸ್ಮರಣೀಯ ಗೆಲುವು ಒಲಿಸಿಕೊಂಡಿದ್ದರು. ಇದೀಗ ದ್ವಿತೀಯ ಸುತ್ತಿನಲ್ಲಿ ನಾಗಲ್ ಸೋತರೂ ಈ ಸಾಧನೆಗಾಗಿ ಒಟ್ಟಾರೆ 98 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ. ಇದು ಅವರ 2024ರ ಟೆನಿಸ್ ಕೂಟಗಳ ಪ್ರವಾಸ ಖರ್ಚನ್ನು ಬಹುತೇಕ ಭರಿಸಲಿದೆ. ಬೋಪಣ್ಣ-ಎಬ್ಡೆನ್ ಮುನ್ನಡೆ
ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯದ ಮ್ಯಾಥ್ಯೂ ಎಬ್ಡೆನ್ ಅವರು ಸ್ಥಳೀಯ ಜೇಮ್ಸ್ ಡಕ್‌ವರ್ತ್ ಮತ್ತು ಮಾರ್ಕ್ ಪೊಲ್ಮಾನ್ಸ್ ಅವರನ್ನು ಸೋಲಿಸಿ ಮುನ್ನಡೆದಿದ್ದಾರೆ. ಆದರೆ ವಿಜಯ್ ಸುಂದರ್ ಪ್ರಶಾಂತ್ ಮತ್ತು ಅನಿರುದ್ಧ್ ಚಂದ್ರಶೇಖರ್ ಅವರು ಹಂಗೇರಿಯ ಮಾರ್ಟನ್ ಫುಸ್ಕೋವಿಕ್ಸ್ ಮತ್ತು ಫಾಬಿಯನ್ ಮರೊಜನ್ ಅವರಿಗೆ 3-6, 4-6 ಸೆಟ್‌ಗಳಿಂದ ಸೋತು ಹೊರಬಿದ್ದರು.