Advertisement
ವಿಶ್ವದ ನಂ. 5 ಆಟಗಾರ್ತಿ ಸಿಂಧು ಏಕಪಕ್ಷೀಯ ಪಂದ್ಯದಲ್ಲಿ ಇಂಡೋ ನೇಶ್ಯದ ಚೈರುನ್ನಿಸಾ ಅವರನ್ನು 21-14, 21-9 ಗೇಮ್‌ಗಳಿಂದ ಉರುಳಿಸಿದರು. ಎದುರಾಳಿಯಿಂದ ಸಿಂಧು ಯಾವುದೇ ಪ್ರತಿರೋಧ ಎದುರಿಸಲಿಲ್ಲ. ನಿರಾ ಯಾಸವಾಗಿ ಜಯ ಪಡೆದ ಸಿಂಧು ದ್ವಿತೀಯ ಸುತ್ತಿನಲ್ಲಿ ಥಾಯ್ಲೆಂಡಿನ ನಿಚಾನ್ ಜಿಂದಾಪೋಲ್ ಅವರನ್ನು ಎದುರಿಸಲಿದ್ದಾರೆ.
6ನೇ ಶ್ರೇಯಾಂಕದ ಸಮೀರ್ ವರ್ಮ ಮೊದಲ ಸುತ್ತಿನಲ್ಲಿ ಮುನ್ನ ಡೆಯಲು ತೀವ್ರ ಹೋರಾಟ ನಡೆಸಬೇ ಕಾಯಿತು. 3 ಗೇಮ್‌ಗಳ ಹೋರಾಟದ ಬಳಿಕ ಮಲೇಶ್ಯದ ಲೀ ಝಿ ಜಿಯ ಅವರನ್ನು 21-15, 16-21, 21-12 ಗೇಮ್‌ಗಳಿಂದ ಉರುಳಿಸಿ ಸಂಭ್ರಮಿಸಿದರು. ವರ್ಮ ಕಳೆದ ತಿಂಗಳು ನಡೆದ ಸುದಿರ್ಮನ್ ಕಪ್ ಕೂಟದಲ್ಲಿ ಲೀ ವಿರುದ್ಧ ಸೋತಿದ್ದರು. ವಿಶ್ವ ಟೂರ್ ಫೈನಲ್ಸ್‌ನಲ್ಲಿ ಸೆಮಿ ಫೈನಲ್ ತಲುಪಿದ್ದ 25ರ ಹರೆಯದ ಸಮೀರ್ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ವಾಂಗ್ ಟಿಝು ಅವರನ್ನು ಎದುರಿಸಲಿದ್ದಾರೆ. ಭಾರತದ ಮತ್ತೂಬ್ಬ ಆಟಗಾರ ಬಿ. ಸಾಯಿ ಪ್ರಣೀತ್ ಕೊರಿಯಾದ ಲೀ ಡಾಂಗ್ ಕ್ಯುನ್ ಅವರನ್ನು 21-16, 21-14 ಗೇಮ್‌ಗಳಿಂದ ಸೋಲಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಅವರು ಇಂಡೋನೇಶ್ಯದ ಅಂತೋನಿ ಸಿನಿಸುಕಾ ಜಿಂಟಿಂಗ್ ಸವಾಲನ್ನು ಎದುರಿಸಲಿದ್ದಾರೆ.
Related Articles
ಪುರುಷರ ಡಬಲ್ಸ್‌ನಲ್ಲೂ ಭಾರತ ಶುಭಾರಂಭ ಮಾಡಿದೆ. ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಭಾರತದವರೇ ಆದ ಮನು ಅತ್ರಿ-ಸುಮೀತ್ ರೆಡ್ಡಿ ಅವರನ್ನು ಸುಲಭವಾಗಿ 21-12, 21-16ರಿಂದ ಮಣಿಸಿ ದ್ವಿತೀಯ ಸುತ್ತು ತಲುಪಿದರು.
Advertisement
ಆದರೆ ವನಿತಾ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಕೊರಿಯದ ಬೀಕ್ ಹಾ ನಾ-ಕಿಮ್ ಹೈ ರಿನ್ ಅವರಿಗೆ 14-21, 13-21 ಗೇಮ್‌ಗಳಿಂದ ಶರಣಾದರು.