Advertisement

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

10:37 PM Jan 22, 2022 | Team Udayavani |

ಮೆಲ್ಬರ್ನ್: ವಿಶ್ವದ ನಂ.2 ಆಟಗಾರ ಡ್ಯಾನಿಲ್‌ ಮೆಡ್ವೆಡೇವ್‌, ಗ್ರೀಕ್‌ನ ದೈತ್ಯ ಟೆನಿಸಿಗ ಸ್ಟೆಫ‌ನಸ್‌ ಸಿಸಿಪಸ್‌, ಆತಿಥೇಯ ನಾಡಿದ ಅಲೆಕ್ಸ್‌ ಡಿ ಮಿನೌರ್‌, ಮರಿನ್‌ ಸಿಲಿಕ್‌ ಅವರೆಲ್ಲ ಆಸ್ಟ್ರೇಲಿಯನ್‌ ಓಪನ್‌ ಕೂಟದ 4ನೇ ಸುತ್ತಿಗೆ ಪಯಣ ಬೆಳೆಸಿದ್ದಾರೆ.

Advertisement

ವನಿತಾ ಸಿಂಗಲ್ಸ್‌ ವಿಭಾಗದಲ್ಲಿ ಅರಿನಾ ಸಬಲೆಂಕಾ, ಸಿಮೋನಾ ಹಾಲೆಪ್‌ ಗೆಲುವಿನ ಓಟ ಮುಂದು ವರಿಸಿದ್ದಾರೆ.
ಕೂಟದಲ್ಲಿ ಉಳಿದಿರುವ ಉನ್ನತ ರ್‍ಯಾಂಕಿಂಗ್‌ ಆಟಗಾರನಾಗಿರುವ ಡ್ಯಾನಿಲ್‌ ಮೆಡ್ವೆಡೇವ್‌ ಹಾಲೆಂಡ್‌ನ‌ ಬೋಟಿಕ್‌ ಡಿ ಝಾಂಡ್‌ಸ್ಕಲ್ಪ್ ಅವರನ್ನು 6-4, 6-4, 6-2ರಿಂದ ಮಣಿಸಿದರು. ಅವರಿನ್ನು ಅಮೆರಿಕದ ಕ್ರೇಸಿ ವಿರುದ್ಧ ಆಡಲಿ ದ್ದಾರೆ.

ಆಸ್ಟ್ರೇಲಿಯದ ಅಲೆಕ್ಸ್‌ ಡಿ ಮಿನೌರ್‌ ಸ್ಪೇನ್‌ನ ಪಾಬ್ಲೊ ಆ್ಯಂಡುಜರ್‌ ವಿರುದ್ಧ 6-4, 6-4, 6-2 ಅಂತರದ ಮೇಲುಗೈ ಸಾಧಿಸಿದರು. ಸಿಸಿಪಸ್‌ 4 ಸೆಟ್‌ಗಳ ಕಾದಾಟದ ಬಳಿಕ ಫ್ರಾನ್ಸ್‌ ನ ಬೆನೋಯಿಟ್‌ ಪೇರ್‌ ಅವರನ್ನು 6-3, 7-5, 6-7 (2-7), 6-4ರಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

ಕ್ರೊವೇಶಿಯಾದ ಮರಿನ್‌ ಸಿಲಿಕ್‌ ರಶ್ಯದ 5ನೇ ಶ್ರೇಯಾಂಕಿತ ಆ್ಯಂಡ್ರೆ ರುಬ್ಲೇವ್‌ ಅವರಿಗೆ 7-5, 7-6 (7-3), 3-6, 6-3ರಿಂದ ಆಘಾತವಿಕ್ಕಿದರು.

ವ‌ನಿತಾ ಸಿಂಗಲ್ಸ್‌ನಲ್ಲಿ ಸಿಮೋನಾ ಹಾಲೆಪ್‌ ಮಾಂಟೆನೆಗ್ರೋದ ಡಂಕಾ ಕೊವಿನೆಕ್‌ ಅವರನ್ನು 6-2, 6-1ರಿಂದ ಪರಾಭವಗೊಳಿಸಿದರು.

Advertisement

ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಬೋಪಣ್ಣ ಸೋಲು
ಮಿಶ್ರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ-ದರಿಜಾ ಜುರಾಕ್‌ ಶ್ರೀಬರ್‌ (ಕ್ರೊವೇಶಿಯ) ಮೊದಲ ಸುತ್ತಿನಲ್ಲೇ ಎಡವಿದರು. ಆ್ಯಂಡ್ರೆ ಗುಲುಬೇವ್‌ (ಕಜಾಕ್‌ಸ್ಥಾನ್‌)-ಲುಡ್ಮಿಲಾ ಕಿಶೆನೋಕ್‌ (ಉಕ್ರೇನ್‌) ವಿರುದ್ಧ ದಿಟ್ಟ ಹೋರಾಟ ನೀಡಿ 6-1, 4-6, 9-11ರಿಂದ ಸೋತರು.

 

Advertisement

Udayavani is now on Telegram. Click here to join our channel and stay updated with the latest news.

Next