ಆಸ್ಟ್ರೇಲಿಯಾ: ಹಾವಿನ ಹೆಸರು ಕೇಳಿದರೆ ಭಯವಾಗುತ್ತೆ ಅಂಥದರಲ್ಲಿ ಮನೆಯೊಳಗೇ ಹಾವು ಬಂದರೆ ಹೇಗಿರಬೇಡ ಅದೇ ರೀತಿಯ ಘಟನೆಯೊಂದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದಿದೆ.
ಮನೆಯ ಶೌಚಾಲಯದೊಳಗೆ ಹಾವೊಂದನ್ನು ಕಂಡು ಮನೆ ಮಾಲೀಕ ಬೆಚ್ಚಿ ಬಿದ್ದಿದ್ದಾರೆ.
ಮನೆಯ ಶೌಚಾಲಯದೊಳಗೆ ಸುಮಾರು 4 ಅಡಿ ಉದ್ದದ ಹಾವೊಂದು ಕಂಡುಬಂದಿದೆ ಇದನ್ನು ಕಂಡ ಮನೆ ಮಾಲೀಕ ಗಾಬರಿಯಿಂದ ಓಡಿ ಬಂದು ಹಾವು ರಕ್ಷಣೆ ಮಾಡುವವರಿಗೆ ಕರೆ ಮಾಡಿದ್ದಾನೆ.
ಕೂಡಲೇ ಘಟನಾ ಸ್ಥಳಕ್ಕೆ ಬಂದ ಹಾವು ರಕ್ಷಣಾ ತಂಡ ಮನೆಯೊಳಗೆ ಅವಿತಿದ್ದ ಹಾವನ್ನು ಹಿಡಿದು ಮನೆ ಮಾಲಿಕನಿಗೆ ಧೈರ್ಯ ತುಂಬಿದ್ದಾರೆ. ಮನೆಯೊಳಗಿದ್ದ ಹಾವು ವಿಷ ರಹಿತವಾಗಿತ್ತು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಅಲ್ಲದೆ ಹಾವುಗಳು ಯಾರಿಗೂ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಹಾವಿನ ಬಗ್ಗೆ ಮನವರಿಕೆ ಮಾಡಿದ ಬಳಿಕ ಮನೆ ಮಾಲಿಕನಿಗೆ ಕೊಂಚ ಧೈರ್ಯ ಬಂತು.
ಬಳಿಕ ಹಾವನ್ನು ರಕ್ಷಣಾ ತಂಡ ನಿರ್ಜನ ಸ್ಥಳದಲ್ಲಿ ಬಿಟ್ಟು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ತ್ರಿಪುರಾ ವಿಧಾನಸಭಾ ಚುನಾವಣೆ: 48 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ