Advertisement

ಐಪಿಎಲ್‌ಗಾಗಿ ಕೊಹ್ಲಿಯನ್ನು ಅಣಕಿಸುವ ತಂಟೆಗೇ ಹೋಗುತ್ತಿಲ್ಲ ಆಸೀಸಿಗರು!

07:29 PM Apr 08, 2020 | keerthan |

ಮೆಲ್ಬರ್ನ್: ಕ್ರಿಕೆಟ್‌ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಬಲ್ಲಂತಹ ಸ್ಫೋಟಕ ಹೇಳಿಕೆಯೊಂದನ್ನು ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕೆಲ್‌ ಕ್ಲಾರ್ಕ್‌ ನೀಡಿದ್ದಾರೆ.

Advertisement

ಭಾರತದ ಶ್ರೀಮಂತ ಟಿ20 ಕೂಟ ಐಪಿಎಲ್‌ನಲ್ಲಿ, ಎಲ್ಲಿ ತಮ್ಮ ಗುತ್ತಿಗೆ ತಪ್ಪಿ ಹೋಗುತ್ತದೋ ಎಂಬ ಹೆದರಿಕೆಯಿಂದ ಆಸೀಸ್‌ ಕ್ರಿಕೆಟಿಗರು, ಭಾರತೀಯ ಕ್ರಿಕೆಟ್‌ ತಂಡದ ನಾಯಕ ಕೊಹ್ಲಿಯನ್ನಾಗಲೀ, ಇತರೆ ಆಟಗಾರರನ್ನಾಗಲೀ ಅಣಕಿಸಲು (ಸ್ಲೆಜಿಂಗ್‌) ಹೋಗುತ್ತಿಲ್ಲ! ಹಿಂದಿಗಿಂತ ಆಸೀಸಿಗರು ತಣ್ಣಗಾಗಿದ್ದಾರೆ. ಬರೀ ಆಸೀಸಿಗರು ಮಾತ್ರವಲ್ಲ, ವಿಶ್ವದ ಇತರೆ ದೇಶಗಳ ಆಟಗಾರರ ಕಥೆಯೂ ಇದೆ ಎಂದು ಕ್ಲಾರ್ಕ್‌ ಹೇಳಿದ್ದಾರೆ.

ಐಪಿಎಲ್‌ನಲ್ಲಾಗಲೀ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಾಗಲೀ ಭಾರತೀಯರು ಆರ್ಥಿಕವಾಗಿ ಎಷ್ಟು ಶ್ರೀಮಂತರು ಎನ್ನುವುದು ಎಲ್ಲರಿಗೂ ಗೊತ್ತು. ಒಂದು ವೇಳೆ ಈ ಆಟಗಾರರನ್ನು ಅಣಕಿಸಿದ್ದಾರೆ. ಮುಂದೆ ಅದೇ ಆಟಗಾರರ ಜೊತೆ ಆಡಬೇಕಾಗುತ್ತದೆ. ಆಗ ಬರೀ 6 ವಾರಗಳಿಗೆ ಸಿಗುವ ಭಾರೀ ಹಣ ತಪ್ಪಿಹೋಗಬಹುದು ಎಂಬ ಲೆಕ್ಕಾಚಾರದಲ್ಲಿ ಯಾವುದೇ ಆಟಗಾರ ಸ್ಲೆಜಿಂಗ್‌
ತಂಟೆಗೆ ಹೋಗುತ್ತಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕ್ಲಾರ್ಕ್‌ ಹೇಳಿದ್ದಾರೆ.

ಕ್ಲಾರ್ಕ್‌ ಹೇಳಿದ್ದೇನು?: ಹಿಂದೆಲ್ಲ ಬಹಳ ನಿರ್ದಯವಾಗಿ ವರ್ತಿಸುತ್ತಿದ್ದ ಆಸ್ಟ್ರೇಲಿಯ ಕ್ರಿಕೆಟಿಗರು ಈಗ ಕೊಹ್ಲಿ ಕಂಡರೆ ಸುಮ್ಮನಾಗುತ್ತಾರೆ. ಕಾರಣ ಅವರೊಂದಿಗೆ ಬೆಂಗಳೂರು ಐಪಿಎಲ್‌ ತಂಡದಲ್ಲಿ ಆಡುವ ಅವಕಾಶ ತಪ್ಪಿಹೋಗುವ ಭೀತಿ. ಇದರಿಂದ ಆಸ್ಟ್ರೇಲಿಯ ಆಟಗಾರರ ಆರ್ಭಟ ಮುಂಚಿಗಿಂತ ತಗ್ಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ರೋಚಕತೆ ಈಗ ತಗ್ಗಿದೆ’ ಎಂದು ಕ್ಲಾರ್ಕ್‌ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಆಸ್ಟ್ರೇಲಿಯದ ಹಲವು ಪ್ರಮುಖರು ಆಡುತ್ತಿದ್ದಾರೆ. ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌, ಪ್ಯಾಟ್‌ ಕಮಿನ್ಸ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌ ಇದರಲ್ಲಿ ಪ್ರಮುಖರು

Advertisement
Advertisement

Udayavani is now on Telegram. Click here to join our channel and stay updated with the latest news.

Next