Advertisement
ಮೆಲ್ಬೋರ್ನ್‌ನ ‘ದಿ ಏಜ್’ ಪತ್ರಿಕೆಯು ಈ ಬಗ್ಗೆ ವರದಿ ಮಾಡಿದ್ದು, ಮಹಿಳೆ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಇಂಟೆಗ್ರಿಟಿಯ ಮಾಜಿ ಮುಖ್ಯಸ್ಥ ಸೀನ್ ಕ್ಯಾರೊಲ್ ನಡುವಿನ ಫೋನ್ ಕರೆಯ ರೆಕಾರ್ಡಿಂಗ್ ಅನ್ನು ಸ್ವೀಕರಿಸಿದೆ ಎಂದು ಭಾನುವಾರ ವರದಿಯಲ್ಲಿ ತಿಳಿಸಿದೆ. ಈ ಸಂಭಾಷಣೆಯಲ್ಲಿ ಆಟಗಾರರೊಬ್ಬರು ಕೊಕೇನ್ ಬಳಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
Related Articles
Advertisement
ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ನಿಕ್ ಹಾಕ್ಲಿ ಪ್ರತಿಕ್ರಿಯೆ ನೀಡಿದ್ದು, ಮಹಿಳೆಯ ಆರೋಪವು “ಅಸಾಧಾರಣ” ಮತ್ತು “ಐತಿಹಾಸಿಕ”, ಗೌಪ್ಯ ಮಾಹಿತಿಯನ್ನು ಕದಿಯುವುದು ಅಪರಾಧ. ಸುದ್ದಿ ಸೋರಿಕೆಯ ಕುರಿತು ಮಂಡಳಿಯು ಪೊಲೀಸರನ್ನು ಸಂಪರ್ಕಿಸಿದೆ ಎಂದು ಹಾಕ್ಲಿ ಹೇಳಿದರು.
ಅನಾಮಧೇಯ ವಿಳಾಸದಿಂದ ಎನ್‌ಕ್ರಿಪ್ಟ್ ಮಾಡಿದ ಇಮೇಲ್ ಸೇವೆಯ ಮೂಲಕ ರೆಕಾರ್ಡಿಂಗ್ ಅನ್ನು ಪೇಪರ್‌ಗೆ ಕಳುಹಿಸಲಾಗಿದೆ ಎಂದು ‘ದಿ ಏಜ್’ ಹೇಳಿದೆ.
ಕೆಲ ದಿನಗಳ ಹಿಂದೆ ಮಾಜಿ ಟೆಸ್ಟ್ ನಾಯಕ ಟಿಮ್ ಪೇನ್ ಅವರ ಸೆಕ್ಸ್ಟಿಂಗ್ ವಿಚಾರ ಬಯಲಾಗಿತ್ತು. ಇದಾದ ಬಳಿಕ ಪೇನ್ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.