Advertisement
ಆಸ್ಟ್ರೇಲಿಯಾದ ಪೋರನೊಬ್ಬ ಜಸ್ಪ್ರೀತ್ ಬುಮ್ರಾ ಶೈಲಿಯಲ್ಲಿ ಬೌಲಿಂಗ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೈಕಲ್ ಕರ್ಟಿನ್ ಎನ್ನುವವವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು “ನಿಮ್ಮ ಶ್ರೇಷ್ಠ ಸರಣಿಯ ಗೆಲುವಿನಿಂದ ಬಂದ ಏಕೈಕ ಸಮಸ್ಯೆ ಮುಂದಿನ ಪೀಳಿಗೆಯ ಆಸ್ಟ್ರೇಲಿಯಾ ಕ್ರಿಕೆಟಿಗರು ನಿಮ್ಮಿಂದ ಪ್ರೇರಿತರಾಗಿರಬಹುದು’ ಎಂದಿದ್ದಾರೆ .
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಸ್ಪ್ರೀತ್ ಬುಮ್ರಾ, ‘ ಹುಡುಗ ಮುದ್ದಾಗಿದ್ದಾನೆ. ಅವನಿಗೆ ನನ್ನ ಹಾರೈಕೆಗಳನ್ನು ತಿಳಿಸಿ ಎಂದಿದ್ದಾರೆ. ಇತ್ತೀಚೆಗಷ್ಟೇ ಮುಗಿದ ಬಾರ್ಡರ್ – ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 21 ವಿಕೆಟ್ ಪಡೆದು ಬುಮ್ರಾ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದಿದ್ದರು.