ಸಿಡ್ನಿ: ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್)ನಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದ ಗಮನ ಸೆಳೆದಿರುವ ಆಸ್ಟ್ರೇಲಿಯಾ ದಿಗ್ಗಜ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದಾರೆ.
ಹೀಗೆಂದು ಸ್ವತಃ ವಾರ್ನರ್ ಹೇಳಿರುವುದು ಅಚ್ಚರಿ ಮೂಡಿಸಿದೆ. ಕ್ರಿಕೆಟ್‌ನಂತರ ಮುಂದಿನ ಭವಿಷ್ಯದ ಬಗ್ಗೆ ಪ್ರಶ್ನೆ ಎದುರಾದಾಗ ಆಸ್ಟ್ರೇಲಿಯಾದ ರಾಜಕೀಯ ರಂಗಕ್ಕೆ ಧುಮುಕುವ ಸುಳಿವನ್ನು ವಾರ್ನರ್ ನೀಡಿದರು. ಅಷ್ಟೇ ಅಲ್ಲ ಅವಕಾಶ ಸಿಕ್ಕಿದರೆ ರಾಜಕೀಯ ಪ್ರವೇಶಿಸುವ ಮೂಲಕ ಜನಪರ ಧನಿಯಾಗಿ ಸಮಾಜದಲ್ಲಿ ಹಲವಾರು ಬದಲಾವಣೆ ತರಲು ನಿರ್ಧರಿಸಿರುವುದಾಗಿ ತಿಳಿಸಿದರು.
ವಾರ್ನರ್ ಇತ್ತೀಚೆಗೆ ಸ್ಟೀವ್ ಸ್ಮಿತ್ ಅನುಪಸ್ಥಿತಿಯಲ್ಲಿ ಟಿ20 ತ್ರಿಕೋನ ಸರಣಿಯಲ್ಲಿ ಆಸೀಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ.
ರಾಜಕೀಯ ಪ್ರವೇಶಿಸಿದ ವಿದೇಶಿ ಕ್ರಿಕೆಟಿಗರು: ಪಾಕ್‌ನ ಇಮ್ರಾನ್ ಖಾನ್, ಲಂಕಾದ ಅರ್ಜುನ್ ರಣತುಂಗ, ಇಂಗ್ಲೆಂಡ್‌ನ ಅಲೆಕ್ಸ್ ಡಗ್ಲೆಸ್, ಸನತ್ ಜಯಸೂರ್ಯ ಮುಂತಾದವರು.
ರಾಜಕೀಯ ಪ್ರವೇಶಿಸಿದ ಭಾರತೀಯ ಕ್ರಿಕೆಟಿಗರು: ಕೀರ್ತಿ ಅಜಾದ್, ಮೊಹಮ್ಮದ್ ಅಜರುದ್ದೀನ್, ನವಜೋತ್ ಸಿಂಗ್ ಸಿಧು, ಮೊಹಮ್ಮದ್ ಕೈಫ್, ವೇಗದ ಬೌಲರ್ ಪ್ರವೀಣ್ ಕುಮಾರ್.