Advertisement

ಚೆಂಡು ವಿರೂಪಿಗಳ ಪಾಪದ ಕಣ್ಣೀರು !

06:40 AM Mar 30, 2018 | Team Udayavani |

ಸಿಡ್ನಿ: ಚೆಂಡು ವಿರೂಪ ಮಾಡಿ ಜೀವಮಾನಪೂರ್ತಿ ಮುಜುಗರ ಅನುಭವಿಸುವ ದುಸ್ಥಿತಿ ಎದುರಿಸುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಕಣ್ಣೀರು ಹಾಕಿದ್ದಾರೆ.

Advertisement

ಉಪನಾಯಕ ಡೇವಿಡ್‌ ವಾರ್ನರ್‌, ಇದು ನಾವೆಲ್ಲರೂ ಪ್ರೀತಿಸುವ ಕ್ರೀಡೆಗೆ ಹಚ್ಚಿರುವ ಕಳಂಕ ಎಂದು ನೊಂದು ನುಡಿದಿದ್ದಾರೆ. ಆರಂಭಿಕ ಬ್ಯಾಟ್ಸ್‌ ಮನ್‌ ಕ್ಯಾಮರಾನ್‌ ಬ್ಯಾನ್‌ಕ್ರಾಫ್ಟ್, ನಾನು ಸುಳ್ಳು ಹೇಳಿದ್ದಕ್ಕೆ ಕ್ಷಮೆಯಿರಲಿ ಎಂದು ಬೇಡಿಕೊಂಡಿದ್ದಾರೆ.

ಇಷ್ಟೆಲ್ಲದರ ಮಧ್ಯೆ ಆಸ್ಟ್ರೇಲಿಯಾದ ತಂಡದ ಕೋಚ್‌ ಡ್ಯಾರೆನ್‌ ಲೆಹ್ಮನ್‌ ಕಣ್ಣಲ್ಲಿ ನೀರು ತುಂಬಿಕೊಂಡು ಹುದ್ದೆ ತ್ಯಜಿಸಿದ್ದಾರೆ.
ಕೇಪ್‌ಟೌನ್‌ನಲ್ಲಿ ದ.ಆμÅಕಾ ವಿರುದಟಛಿ ನಡೆದ 3ನೇ ಟೆಸ್ಟ್‌ನಲ್ಲಿ ಚೆಂಡು ವಿರೂಪ ಮಾಡಿದ ಪರಿಣಾಮ ಸ್ಮಿತ್‌, ವಾರ್ನರ್‌ 1 ವರ್ಷ, ಬ್ಯಾನ್‌ ಕ್ರಾಫ್ಟ್ 9 ತಿಂಗಳು ನಿಷೇಧಕ್ಕೊಳಗಾಗಿದ್ದಾರೆ.

ತಂಡದ ಕೋಚ್‌ ಆಗಿದ್ದ ಲೆಹ್ಮನ್‌ ತನಿಖೆಯ ನಂತರ ನಿರಪರಾಧಿ ಎಂದು ಕರೆಸಿಕೊಂಡಿದ್ದಾರೆ. ಆದರೆ ಘಟನೆಯ ಹಿನ್ನೆಲೆಯಲ್ಲಿ ಎಲ್ಲರೂ ವ್ಯಕ್ತಿಗತವಾಗಿ ಕ್ಷಮೆಯಾಚನೆ ಮಾಡಿದ್ದಾರೆ. ಇದು ತಮ್ಮಿಂದಾದ ಅತಿದೊಡ್ಡ ತಪ್ಪು ಎಂದು ನೊಂದು ನುಡಿದಿದ್ದಾರೆ. ಅದರಲ್ಲೂ ಸ್ಮಿತ್‌ ಮತ್ತು ಲೆಹ್ಮನ್‌ ಗದ್ಗದಿತರಾಗಿ ಕಣ್ಣೀರು ಹಾಕಿದ್ದಾರೆ.

ಸ್ಮಿತ್‌ ಹೇಳಿದ್ದೇನು?: ತಂಡದ ನಾಯಕನಾಗಿ ನಾನು ಈ ಘಟನೆಯ ಹೊಣೆಯನ್ನು ಬೇರಾರ ಮೇಲೂ ಹಾಕುವುದಿಲ್ಲ. ಅದರ ಪೂರ್ಣ ಜವಾಬ್ದಾರಿ ಹೊರುತ್ತೇನೆ. ನನಗೆ ಗೊತ್ತಿದ್ದರೂ ಪರಿಸ್ಥಿತಿಯನ್ನು ನಿಯಂತ್ರಿಸಲು ನಾನು ಸೋತೆ. ಆಗ ನನಗೆ ಅದರ ಪರಿಣಾಮ ಗೊತ್ತಾಗಲಿಲ್ಲ.ಹೀಗೆ ಮಾಡಿದರೆ ಏನಾಗುತ್ತದೆ ಎಂದು ಗೊತ್ತಾಗಿದೆ. ಇದು ನನ್ನನ್ನು ಜೀವಮಾನಪೂರ್ತಿ ಕಾಡುವ ಘಟನೆಯಾಗಿದೆ.

Advertisement

ಇದು ಬರೀ ನನಗೆ ಮಾತ್ರವಲ್ಲ ನನ್ನನ್ನು ಪ್ರೀತಿಸುವ ಅಪ್ಪ, ಅಮ್ಮನನ್ನು ಬಹಳ ನೋಯಿಸುತ್ತದೆ. ವೃದಟಛಿರಾಗಿರುವ ಅವರನ್ನು ಮುಜುಗರಕ್ಕೀಡು ಮಾಡಿದ್ದೇನೆ. ನನ್ನನ್ನು ಕ್ಷಮಿಸಿ. ಈ ತಪ್ಪನ್ನು ತಿದ್ದಿಕೊಳ್ಳಲು ಏನೇನು ಸಾಧ್ಯವೋ ಅದನ್ನೆಲ್ಲ ಮಾಡುತ್ತೇನೆ. ಒಳ್ಳೆಯವರೂ ತಪ್ಪು ಮಾಡುತ್ತಾರೆ. ನಾನೂ ಮಾಡಿದ್ದೇನೆ. ಇದು ಇತರರಿಗೆ ಒಂದು ಪಾಠ ಎಂದು ಕಣ್ಣೀರು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next