ಸೈಂಟ್ ಲೂಸಿಯಾ: ಅಂತಿಮ ಓವರ್ ನಲ್ಲಿ ಸ್ಟಾರ್ಕ್ ಎಸೆದ ಅದ್ಭುತ ಬೌಲಿಂಗ್ ಪರಿಣಾಮ ಆಸ್ಟ್ರೇಲಿಯಾ ತಂಡ ಕೊನೆಗೂ ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸುವಲ್ಲಿ ಸಫಲವಾಗಿದೆ. ನಾಲ್ಕನೇ ಟಿ20 ಪಂದ್ಯದಲ್ಲಿ ಫಿಂಚ್ ಪಡೆ ನಾಲ್ಕು ರನ್ ಗಳ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡ ಆರು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದರೆ, ವಿಂಡೀಸ್ ತಂಡ 185 ರನ್ ಗಳಿಸಲಷ್ಟೇ ಶಕ್ತವಾಯಿತು.
ಸತತ ವೈಫಲ್ಯ ಅನುಭವಿಸಿದ್ದ ನಾಯಕ ಫಿಂಚ್ ಮತ್ತೆ ಫಾರ್ಮ್ ಗೆ ಮರಳಿದರು. 37 ಎಸೆತಗಳಲ್ಲಿ 53 ರನ್ ಗಳಿಸಿದರು. ಮಿಚೆಲ್ ಮಾರ್ಶ್ ಕೇವಲ 44 ಎಸೆಗಳಲ್ಲಿ 75 ರನ್ ಗಳಿಸಿದರು. ಆರು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ಮಾರ್ಶ್ ಬಾರಿಸಿದರು. ಕೊನೆಯಲ್ಲಿ ಡೇನಿಯಲ್ ಕ್ರಿಶ್ಚಿಯನ್ 14 ಎಸೆತಗಳಲ್ಲಿ 22 ರನ್ ಗಳಿಸಿದರು.
ಇದನ್ನೂ ಓದಿ:ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾಗೆ ಕೋವಿಡ್ ಕಾಟ: ಓರ್ವ ಆಟಗಾರನಿಗೆ ಪಾಸಿಟಿವ್
ಗುರಿ ಬೆನ್ನತ್ತಿದ್ದ ವಿಂಡೀಸ್ ಗೆ ಸಿಮನ್ಸ್ ಮತ್ತು ಲೆವಿಸ್ ಉತ್ತಮ ಆರಂಭ ಒದಗಿಸಿದರು. ಸಿಮನ್ಸ್ 72 ಮತ್ತ ಲೆವಿಸ್ 31 ರನ್ ಗಳಿಸಿದರು. ಆದರೆ ಗೇಲ್, ಫ್ಲೆಚರ್, ಪೂರನ್ ವಿಫಲರಾದರು. ಫ್ಯಾಬಿಯನ್ ಅಲೆನ್ 29 ರನ್ ಗಳಿಸಿದರು. ಅಂತಿಮ ಓವರ್ ನಲ್ಲಿ 11 ರನ್ ಬೇಕಿತ್ತು. ರಸ್ಸೆಲ್ ಸ್ಟ್ರೈಕ್ ನಲ್ಲಿದ್ದರು. ಆದರೆ ಸ್ಟಾರ್ಕ್ ಬಿಗುದಾಳಿಗೆ ರಸ್ಸೆಲ್ ಗಳಿಸಿದ್ದು ಕೇವಲ ಆರು ರನ್ ಮಾತ್ರ. ಇದರೊಂದಿಗೆ ಆಸೀಸ್ ಸರಣಿಗೆ ಮೊದಲ ಗೆಲುವು ಸಾಧಿಸಿತು.