Advertisement

ಗೆಲುವಿನ ಖಾತೆ ತೆರೆದ ಆಸೀಸ್‌

12:12 PM Jan 27, 2018 | Team Udayavani |

ಅಡಿಲೇಡ್‌: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯನ್ನು ಕಳೆದುಕೊಂಡ ಬಳಿಕ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ಗೆಲುವಿನ ಖಾತೆ ತೆರೆದಿದೆ. ಶುಕ್ರವಾರ “ಅಡಿಲೇಡ್‌ ಓವಲ್‌’ನಲ್ಲಿ ನಡೆದ 4ನೇ ಪಂದ್ಯದಲ್ಲಿ 3 ವಿಕೆಟ್‌ ಅಂತರದ ಜಯ ಸಾಧಿಸಿತು.

Advertisement

ಸಣ್ಣ ಮೊತ್ತದ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 44.5 ಓವರ್‌ಗಳಲ್ಲಿ 196 ರನ್ನಿಗೆ ಕುಸಿದರೆ, ಆಸ್ಟ್ರೇಲಿಯ 37 ಓವರ್‌ಗಳಲ್ಲಿ 7 ವಿಕೆಟಿಗೆ 197 ರನ್‌ ಬಾರಿಸಿ ಗೆಲುವನ್ನಾಚರಿಸಿತು. ಆರಂಭಿಕನಾಗಿ ಇಳಿದ ಟ್ರ್ಯಾವಿಸ್‌ ಹೆಡ್‌ ಅತ್ಯಮೂಲ್ಯ 96 ರನ್‌ ಬಾರಿಸುವ ಮೂಲಕ ತಂಡವನ್ನು ಸುರಕ್ಷಿತವಾಗಿ ದಡ ಸೇರಿಸಿದರು.

ಹ್ಯಾಝಲ್‌ವುಡ್‌ ಹಾಗೂ ಕಮಿನ್ಸ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ಬರೀ 8 ರನ್ನಿಗೆ 5 ವಿಕೆಟ್‌ ಉರುಳಿಸಿಕೊಂಡು ಚಿಂತಾಜನಕ ಸ್ಥಿತಿ ತಲುಪಿತ್ತು. ಆದರೆ ಕ್ರಿಸ್‌ ವೋಕ್ಸ್‌ (78), ಎವೋನ್‌ ಮಾರ್ಗನ್‌ (33), ಮೊಯಿನ್‌ ಅಲಿ (33) ಮತ್ತು ಟಾಮ್‌ ಕರನ್‌ (35) ಅವರ ಹೋರಾಟದ ಫ‌ಲವಾಗಿ ಇನ್ನೂರರ ಗಡಿಯನ್ನು ಸಮೀಪಿಸಿತು. ಕಮಿನ್ಸ್‌ 4, ಹ್ಯಾಝಲ್‌ವುಡ್‌ ಮತ್ತು ಟೈ ತಲಾ 3 ವಿಕೆಟ್‌ ಹಾರಿಸಿದರು. ಕಮಿನ್ಸ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಆಸೀಸ್‌ ಪರ ಹೆಡ್‌ 35ನೇ ತನಕ ಕ್ರೀಸ್‌ ಆಕ್ರಮಿಸಿಕೊಂಡು ತಂಡ ವನ್ನು ಸಂಕಟದಿಂದ ಪಾರು ಮಾಡಿದರು. ಅವ ರಿಗೆ ನಾಲ್ಕೇ ರನ್‌ ಕೊರತೆಯಿಂದ ದ್ವಿತೀಯ ಶತಕ ತಪ್ಪಿತು (107 ಎಸೆತ, 15 ಬೌಂಡರಿ). ಮಿಚೆಲ್‌ ಮಾರ್ಷ್‌ 32, ಟಿಮ್‌ ಪೇನ್‌ 25 ರನ್‌ ಹೊಡೆದರು. ಅಂತಿಮ ಏಕದಿನ ಪಂದ್ಯ ಜ. 28ರಂದು ಪರ್ತ್‌ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next