Advertisement

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

07:20 PM Oct 23, 2021 | Team Udayavani |

ಅಬುಧಾಬಿ: ಟಿ20 ವಿಶ್ವಕಪ್‌ ನ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಓವರ್ ನಲ್ಲಿ ರೋಚಕ ಜಯ ದಾಖಲಿಸಿದೆ.

Advertisement

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾವು ಬಿಗು ಬೌಲಿಂಗ್ ದಾಳಿ ನಡೆಸಿ ದಕ್ಷಿಣ ಆಫ್ರಿಕಾವನ್ನು 20 ಓವರ್ ಗಳಲ್ಲಿ 118 ರನ್ ಗಳಿಗೆ ನಿಯಂತ್ರಿಸಿತು.9 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ರನ್ ಗಳಿಸಲು ಪರದಾಡಿತು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಜಯ ದಾಖಲಿಸಿತು.

ಮೊದಲ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿ ಕೊನೆಯ ಓವರ್ ನ ವರೆಗೆ ಕುತೂಹಲ ಮೂಡಿಸಿತ್ತು.

ದಕ್ಷಿಣ ಆಫ್ರಿಕಾ ಪರ ನಾಯಕ ಬಾವುಮ 12, ಮಾರ್ಕ್ರಾಮ್ 40, ರಬಾಡಾ 19 ಕ್ಲಾಸೆನ್ 13,ಮಿಲ್ಲರ್ 16 ರನ್ ಕೊಡುಗೆ ಸಲ್ಲಿಸಿದರು.

Advertisement

ಆಸಿಸ್ ಬೌಲಿಂಗ್ ನಲ್ಲಿ ಸ್ಟಾರ್ಕ್ ,ಹ್ಯಾಝಲ್ವುಡ್ ಮತ್ತು ಝಮ್ಪಾ ತಲಾ 2 ವಿಕೆಟ್ ಪಡೆದರೆ, ಮ್ಯಾಕ್ಸ್ ವೆಲ್ , ಕ್ಯೂಮಿನ್ಸ್ ತಲಾ ೧ ವಿಕೆಟ್ ಪಡೆದರು.

ಆಸಿಸ್ ಬ್ಯಾಟಿಂಗ್ ನಲ್ಲಿ ನಾಯಕ ಅರೋನ್ ಫಿಂಚ್ ಶೂನ್ಯಕ್ಕೆ ಔಟಾದರು, ಆರಂಭಿಕ ಆಟಗಾರ ವಾರ್ನರ್ 14,ಸ್ಟೀವನ್ ಸ್ಮಿತ್ಕ್ 35,ಮಾರ್ಷ್ 11,ಮ್ಯಾಕ್ಸ್ ವೆಲ್ 18,ಸ್ಟೋಯಿನಿಸ್ 24 ರನ್ ಗಳಿಸಿದರು.

80 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ಆಸಿಸ್ ಕೊನೆಯ ಓವರ್ ನ ವರೆಗೆ ಗೆಲುವಿಗಾಗಿ ಹೋರಾಟ ಮಾಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next