Advertisement

World Cup; ಆಸ್ಟ್ರೇಲಿಯಕ್ಕೆ 33 ರನ್‌ಗಳ ಜಯ :ಹೊರ ಬಿದ್ದ ಹಾಲಿ ಚಾಂಪಿಯನ್

10:44 PM Nov 04, 2023 | Team Udayavani |

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ  ಸೋಲು ಅನುಭವಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್  ಕೂಟದಿಂದ ಹೊರ ಬಿದ್ದಿದೆ.

Advertisement

ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯ 49.3 ಓವರ್ ಗಳಲ್ಲಿ 286 ರನ್ ಗಳಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 48.1 ಓವರ್ ಗಳಲ್ಲಿ 253 ರನ್ ಗಳಿಗೆ ಆಲೌಟಾಗುವ ಮೂಲಕ ಆಡಿದ 7 ನೇ ಪಂದ್ಯದಲ್ಲಿ 6 ನೇ ಸೋಲು ಅನುಭವಿಸಿ ಹೀನಾಯ ಸ್ಥಿತಿಯಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದೆ.

ಅಮೋಘ ಗೆಲುವು ಸಾಧಿಸಿದ ಆಸ್ಟ್ರೇಲಿಯ ಆಡಿದ 7ನೇ ಪಂದ್ಯದಲ್ಲಿ5ನೇ ಗೆಲುವು ಸಾಧಿಸಿ ಹೊಸ ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿದೆ. ಸೆಮಿ ಫೈನಲ್ ಏರುವುದು ಖಚಿತವಾಗಲು ಇನ್ನೂ ಕೆಲವು ಪಂದ್ಯಗಳ ಫಲಿತಾಂಶ ನಿರ್ಣಾಯಕವಾಗಲಿದೆ. ಆಸೀಸ್ ಮುಂದಿನ ಪಂದ್ಯಗಳಲ್ಲಿ ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶ ತಂಡಗಳೊಂದಿಗೆ ಸೆಣಸಲಿದೆ.

ಇಂಗ್ಲೆಂಡ್ ಮುಂದಿನ ಪಂದ್ಯಗಳನ್ನು ಪಾಕಿಸ್ಥಾನ ಮತ್ತು ನೆದರ್ ಲ್ಯಾಂಡ್ಸ್ ವಿರುದ್ಧ ಆಡಲಿದೆ. ಪಾಕಿಸ್ಥಾನ ವನ್ನು ಸೋಲಿಸಿದರೆ ಸೆಮಿ ಫೈನಲ್ ಲೆಕ್ಕಾಚಾರ ಬದಲಾಗಬಹುದು. ನವೆಂಬರ್ 11 ರಂದು ಪಂದ್ಯ ನಡೆಯಲಿದೆ.

ಆಸೀಸ್ ಬ್ಯಾಟಿಂಗ್ ನಲ್ಲಿ ಸ್ಟೀವನ್ ಸ್ಮಿತ್ 44, ಅಮೋಘ ಆಟವಾಡಿದ ಲಬುಶೇನ್ 71 ರನ್, ಕ್ಯಾಮರೂನ್ ಗ್ರೀನ್ 47, ಸ್ಟೊಯಿನಿಸ್ 35, ಕೊನೆಯಲ್ಲಿ ಝಂಪಾ 29 ರನ್ ಕೊಡುಗೆ ಸಲ್ಲಿಸಿದರು.

Advertisement

ಆಸೀಸ್ ಪರ ಬೌಲಿಂಗ್ ನಲ್ಲಿ ಆಡಮ್ ಝಂಪಾ 3 ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ನಾಯಕ ಪ್ಯಾಟ್ ಕಮ್ಮಿನ್ಸ್ ತಲಾ 2 ವಿಕೆಟ್, ಮಾರ್ಕಸ್ ಸ್ಟೊಯಿನಿಸ್ 1 ವಿಕೆಟ್ ಪಡೆದರು.

ಇಂಗ್ಲೆಂಡ್ ಬ್ಯಾಟಿಂಗ್ ನಲ್ಲಿ ಡೇವಿಡ್ ಮಲಾನ್ 50, ಬೆನ್ ಸ್ಟೋಕ್ಸ್ 64, ಮೊಯಿನ್ ಅಲಿ 42, ಕ್ರಿಸ್ ವೋಕ್ಸ್ 32, ಕೊನೆಯಲ್ಲಿ ಡೇವಿಡ್ ವಿಲ್ಲಿ 15, ಆದಿಲ್ ರಶೀದ್ 20 ರನ್ ಗಳಿಸಿದರೂ ಗೆಲುವಿನ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next