Advertisement
ದೊಡ್ಡ ಮೊತ್ತವನ್ನು ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕ ಆಟಗಾರ್ತಿಯರಾದ ಸ್ಮತಿ ಮಂಧನಾ ಮತ್ತು ಪೂನಂ ರಾವತ್ 17.5 ಓವರ್‌ಗಳಲ್ಲಿ 88 ರನ್ ಕಲೆಹಾಕಿ ಉತ್ತಮ ಅಡಿಪಾಯ ಹಾಕಿದ್ದರು. ದುರದೃಷ್ಟವಶಾತ್ ಈ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಮಂಧನಾ ವಿಕೆಟ್ ಉರುಳಿತು. ಮಂಧನಾ 53 ಎಸೆತದಲ್ಲಿ 67 ರನ್ ಬಾರಿಸಿದರು. ಅವರ ಆಟದಲ್ಲಿ 12 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ಆಟಗಾರ್ತಿಯರು ದಿಟ್ಟ ಬ್ಯಾಟಿಂಗ್ ಮೂಲಕ ಆತಿಥೇಯ ಬೌಲರ್‌ಗಳ ಬೆವರಿಳಿಸಿದರು. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಆರಂಭಿಕ ಆಟಗಾರ್ತಿ ನಿಕೋಲ್ ಬೋಲ್ಟನ್ 84 ರನ್ ಹೊಡೆದು ಮತ್ತೆ ಆತಿಥೇಯರಿಗೆ ಸಿಂಹಸ್ವಪ್ನರಾದರು. 88 ಎಸೆತಗಳನ್ನು ಎದುರಿಸಿದ ಬೋಲ್ಟನ್ 12 ಬೌಂಡರಿ ಸಿಡಿಸಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು. ಎಲಿಸ್ ಪೆರ್ರಿ (ಅಜೇಯ 70), ಬೇತ್ ಮೂನಿ (56) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತದ ಪರ ಶಿಖಾ ಪಾಂಡೆ 3 ವಿಕೆಟ್ ಪಡೆದರು.
Related Articles
ಆಸ್ಟ್ರೇಲಿಯ-9 ವಿಕೆಟಿಗೆ 287 (ಬೋಲ್ಟನ್ 84, ಪೆರ್ರಿ ಔಟಾಗದೆ 70, ಮೂನಿ 56, ಶಿಖಾ ಪಾಂಡೆ 61ಕ್ಕೆ 3, ಪೂನಂ ಯಾದವ್ 52ಕ್ಕೆ 2). ಭಾರತ-49.2 ಓವರ್‌ಗಳಲ್ಲಿ 227 (ಮಂಧನಾ 67, ಪೂಜಾ 30, ಪೂನಂ 27, ಜೊನಾಸೆನ್ 51ಕ್ಕೆ 3, ಪೆರ್ರಿ 41ಕ್ಕೆ 2). ಪಂದ್ಯಶ್ರೇಷ್ಠ: ನಿಕೋಲ್ ಬೋಲ್ಟನ್.
Advertisement