ಮೆಲ್ಬೋರ್ನ್: ವನಿತಾ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧನಾ ಹೋರಾಟದ ಹೊರತಾಗಿಯೂ ಭಾರತ ರನ್ ಅಂತರದಿಂದ ಆಸೀಸ್ ವಿರುದ್ಧ ಸೋಲನುಭವಿಸಿದೆ.
ಇಲ್ಲಿನ ಜಂಕ್ಷನ್ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬ್ಯಾಟಿಂಗ್ ಅಯ್ಕೆ ಮಾಡಿತು. ಬೆತ್ ಮೂನಿ ಆಕರ್ಷಕ ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದರು. ಉಳಿದಂತೆ ಮೆಗ್ ಲ್ಯಾನಿಂಗ್, ಗಾರ್ಡನರ್ ತಲಾ 26 ರನ್ ಬಾರಿಸಿದರು. ಕೊನೆಯಲ್ಲಿ ಭಾರತ ಬಿಗು ದಾಳಿ ನಡೆಸಿ ನಿಯಂತ್ರಣ ಸಾಧಿಸಿತು. ಆಸೀಸ್ ಮಹಿಳೆಯರು 20 ಓವರ್ ನಲ್ಲಿ 155 ರನ್ ಗಳಿಸಿತು.
ಭಾರತದ ಪರ ದೀಪ್ತಿ ಶರ್ಮಾ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಭಾರತಕ್ಕೆ ನೆರವಾಗಿದ್ದು ಉಪನಾಯಕಿ ಸ್ಮೃತಿ ಮಂಧನಾ. ಬಿರುಸಿನ ಬ್ಯಾಟಿಂಗ್ ನಡೆಸಿದ ಮಂಧನಾ 37 ಎಸೆತಗಳಿಂದ 66 ರನ್ ಬಾರಿಸಿದರು. ಆದರೆ ಉಳಿದ ಯಾವ ಆಟಗಾರ್ತಿಯೂ ಸ್ಮೃತಿಗೆ ಸಾಥ್ ನೀಡಲಿಲ್ಲ. ಉಳಿದಂತೆ 17 ರನ್ ಗಳಿಸಿದ ರಿಚಾ ಘೋಷ್ ರದ್ದೇ ಹೆಚ್ಚು ರನ್ . ಅಂತಿಮ 35 ಎಸೆತಗಳಲ್ಲಿ 41 ರನ್ ತೆಗೆಯಲು ಇದ್ದಾಗ ಮಂಧನಾ ವಿಕೆಟ್ ಚೆಲ್ಲಿದರು. ನಂತರ ಭಾರತದ ಆಟಗಾರ್ತಿಯರು ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ಭಾರತ ಭರ್ತಿ 20 ಓವರ್ ನಲ್ಲಿ 144 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಆಸೀಸ್ ವನಿತೆಯರ ಪರ ಸ್ಪಿನ್ನರ್ ನಾಲ್ಕು ಓವರ್ ನಲ್ಲಿ 12 ರನ್ ನೀಡಿ ಐದು ವಿಕೆಟ್ ಪಡೆದರು.
ಇದರೊಂದಿಗೆ ಆಸ್ಟ್ರೇಲಿಯಾ ವನಿತಾ ಟಿ20 ತ್ರಿಕೋನ ಸರಣಿಯ ಚಾಂಪಿಯನ್ ಆಗಿ ಮೂಡಿತು. ಇಂಗ್ಲೆಂಡ್ ವನಿತೆಯರು ಫೈನಲ್ ಗೆ ಪ್ರವೇಶ ಪಡೆದಿರಲಿಲ್ಲ.