Advertisement

ವನಿತೆಯರಿಗೆ ವೈಟ್‌ವಾಶ್‌: 3ನೇ ಏಕದಿನದಲ್ಲಿ 97 ರನ್‌ ಸೋಲು

06:00 AM Mar 20, 2018 | Team Udayavani |

ವಡೋದರ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ವನಿತೆಯರು ವೈಟ್‌ವಾಶ್‌ ಅನುಭವಿಸಿದ್ದಾರೆ. ರವಿವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯವನ್ನು ಆಸೀಸ್‌ 97 ರನ್‌ ಅಂತರದಿಂದ ಗೆದ್ದು ಕ್ಲೀನ್‌ಸ್ವೀಪ್‌ ಸಾಹಸಗೈದಿತು.

Advertisement

ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ ಅವರ ಮೊದಲ ಶತಕ ಸಾಹಸದಿಂದ ಆಸ್ಟ್ರೇಲಿಯ 7 ವಿಕೆಟಿಗೆ 332ರಷ್ಟು ಬೃಹತ್‌ ರನ್‌ ಪೇರಿಸಿದರೆ, ಭಾರತ 44.4 ಓವರ್‌ಗಳಲ್ಲಿ 235ಕ್ಕೆ ಆಲೌಟ್‌ ಆಯಿತು. ತವರಿನಂಗಳದಲ್ಲಿ ಮೊದಲೆರಡೂ ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡ ಭಾರತಕ್ಕೆ ಇದು ಪ್ರತಿಷ್ಠೆಯ ಪಂದ್ಯವಾಗಿತ್ತು. ಆದರೆ ಗೆಲುವಿನ ಖಾತೆ ತೆರೆಯಲು ಆತಿಥೇಯರಿಂದ ಸಾಧ್ಯವಾಗಲಿಲ್ಲ.

ಆಸ್ಟ್ರೇಲಿಯದ 332 ರನ್ನುಗಳಲ್ಲಿ ಅಲಿಸಾ ಹೀಲಿ ಪಾಲೇ 133 ರನ್‌ ಆಗಿತ್ತು. ಇದು 58ನೇ ಏಕದಿನ ಪಂದ್ಯದಲ್ಲಿ ಹೀಲಿ ಬಾರಿಸಿದ ಚೊಚ್ಚಲ ಶತಕ. 115 ಎಸೆತ ಎದುರಿಸಿದ ಹೀಲಿ 17 ಬೌಂಡರಿ ಹಾಗೂ 2 ಸಿಕ್ಸರ್‌ ಬಾರಿಸಿ ಮೆರೆದರು. 

ಭಾರತಕ್ಕೆ ಜೆಮಿಮಾ ರೋಡ್ರಿಗಸ್‌ (42) ಮತ್ತು ಸ್ಮತಿ ಮಂಧನಾ (52) ಬಿರುಸಿನ ಆರಂಭದ ಮೂಲಕ ಶತಕದ ಜತೆಯಾಟ ನಿಭಾಯಿಸಿದರು. ಇವರಿಬ್ಬರಿಂದ ಕೇವಲ 13.4 ಓವರ್‌ಗಳಲ್ಲಿ 101 ರನ್‌ ಹರಿದು ಬಂತು. ಆದರೆ ಈ ಜೋಡಿ ಬೇರ್ಪಟ್ಟೊಡನೆ ಕುಸಿತ ಆರಂಭಗೊಂಡಿತು. ದೀಪ್ತಿ ಶರ್ಮ (36), ಸುಷ್ಮಾ ವರ್ಮ (30), ಹರ್ಮನ್‌ಪ್ರೀತ್‌ ಕೌರ್‌ (25) ಹಾಗೂ ನಾಯಕಿ ಮಿಥಾಲಿ ರಾಜ್‌ (21) ಎರಡಂಕೆಯ ಮೊತ್ತ ದಾಖಲಿಸಿದ ಇತರರು.

ಆಸ್ಟ್ರೇಲಿಯ ಪರ ಗಾಡ್ನìರ್‌ 3 ವಿಕೆಟ್‌ ಕಿತ್ತರೆ, ಶಟ್‌ ಹಾಗೂ ಪೆರ್ರಿ ತಲಾ 2 ವಿಕೆಟ್‌ ಉರುಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next